ಚೆನ್ನೈ : ಚೆನ್ನೈನ ಕಾಲೇಜಿನ ಮೂವರು ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಕತ್ತಿ ಹಿಡಿದುಕೊಂಡು ಸಾಹಸ ಪ್ರದರ್ಶಿಸಿದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಇದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇನ್ನೂ ರೈಲಿನ ಫುಟ್ಬೋರ್ಡ್ನ ಅಂಚಿನಲ್ಲಿ ಪ್ರಯಾಣಿಸುವುದು ಕೂಡ ರೈಲ್ವೆ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಅಪರಾಧವಾಗಿದೆ
We would like to inform you that the 3 youths seen in this viral video performing stunts with sharp weapons in their hand, have been arrested by @grpchennai! They are Anbarasu and Ravichandran from Gummidipoondi and Arul from Ponneri. They are all students of Presidency College. pic.twitter.com/3FQVpTWeoW
— DRM Chennai (@DrmChennai) October 11, 2022
ಚೆನ್ನೈನ ಡಿವಿಜನಲ್ ರೈಲ್ವೇ ಮ್ಯಾನೇಜರ್ ಶೇರ್ ಮಾಡಿರುವ ವಿಡಿಯೋದಲ್ಲಿ ಮೂವರು ಯುವಕರು ರೈಲಿನಿಂದ ನೇತಾಡುತ್ತಿರುವಾಗ ರೈಲ್ವೇ ಪ್ಲಾಟ್ಫಾರ್ಮ್ನಲ್ಲಿ ಕತ್ತಿಯಂತಹ ವಸ್ತುವನ್ನು ಎಳೆಯುತ್ತಿರುವುದನ್ನು ಕಾಣಬಹುದು. ರೈಲಿನ ಫುಟ್ಬೋರ್ಡ್ನ ಅಂಚಿನಲ್ಲಿ ಪ್ರಯಾಣಿಸುವುದು ಕೂಡ ರೈಲ್ವೆ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಅಪರಾಧವಾಗಿದೆ. ಹುಡುಗರನ್ನು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಅವರ ಅನುಚಿತ ವರ್ತನೆ ಹಿನ್ನೆಲೆ ಬಂಧಿಸಲಾಗಿದೆ ಎಂದು ಚೆನ್ನೈ, ದಕ್ಷಿಣ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವೀಟ್ ಮಾಡಿದ್ದಾರೆ.
ಬಂಧಿತರು ಗುಮ್ಮಿಡಿಪೂಂಡಿಯ ಅನ್ಬರಸು, ರವಿಚಂದ್ರನ್ ಮತ್ತು ಪೊನ್ನೇರಿಯ ಅರುಲ್ ಎನ್ನುವವರಾಗಿದ್ದು, ಮೂವರೂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.