ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸೈಕಲ್, ನಾವು ಚಿಕ್ಕ ಮಕ್ಕಳಾಗಿದ್ದಾಗ ನಮಗೆ ಪ್ರಿಯವಾದ ನಮ್ಮದೇ ಸ್ವಂತ ವಾಹನ… ದೊಡ್ಡವರ ವಾಹನಗಳ ಜೊತೆ ಹೊಲಿಸಿಕೊಂಡು ನಮ್ಮದೂ ಒಂದು ವಾಹನವಿದೆ ಎಂದು ಬೀಗುತ್ತಿದ್ದೆವು. ಸ್ವಲ್ಪ ದೊಡ್ಡವರಾದ ಮೇಲೆ ಸಹಪಾಠಿಗಳ ಜೊತೆ ಸೇರಿಕೊಂಡು ನಮಗೆ ಬೇಕಾದ ಕಡೆಗೆ ಯಾವುದೇ ಖರ್ಚಿಲ್ಲದೆ ಜಾಲಿಯಾಗಿ ಹೋಗಿ ಬರುತ್ತಿದ್ದ ಕಾಲ ಇಂದಿಗೂ ನಮ್ಮ ಕಣ್ಣಿಗೆ ಕಟ್ಟಿದ ಹಾಗಿದೆ. ಇಂದು ನಾವು ಕಾರು, ಬೈಕುಗಳಲ್ಲಿ ಮಜವಾಗಿ ಓಡಾಡುತ್ತಿದ್ದೇವೆ. ಆದರೂ ಎಲ್ಲೋ ಒಂದು ಕಡೆ ಸೈಕಲ್ ಸವಾರಿ ನೆನೆಸಿಕೊಂಡರೆ ಮನಸ್ಸಿಗೆ ನಿಜಕ್ಕೂ ಖುಷಿಯಾಗುತ್ತದೆ. ಮತ್ತೊಮ್ಮೆ ಆ ದಿನಗಳು ಬರಬಾರದೇ ಎನಿಸುತ್ತದೆ.
BREAKING NEWS : ವೇದಿಕೆಯಲ್ಲೇ ಕೇಂದ್ರ ಸಚಿವ ‘ನಿತಿನ್ ಗಡ್ಕರಿ’ ಅಸ್ವಸ್ಥ |Union Minister Nitin Gadkari
ಸಾಮಾನ್ಯವಾಗಿ ಒಂದು ಸೈಕಲ್ ನಲ್ಲಿ ಇಬ್ಬರು ಕುಳಿತುಕೊಳ್ಳುವುದನ್ನು ನೋಡಿದ್ದೇವೆ. ಆದ್ರೆ ಈ ವಿಡಿಯೊವನ್ನು ನೋಡಿ ಶಾಕ್ ಆಗೋದು ಗ್ಯಾರಂಟಿ…
ಈ ವಿಡಿಯೋ ನೋಡಿ..
आज दुनिया की आबादी 8 अरब हो गई, इस उपलब्धि को हासिल करने में ऐसे इंसानों को बहुत बड़ा योगदान रहा है👇 pic.twitter.com/Fiq62o0OiK
— Jaiky Yadav (@JaikyYadav16) November 15, 2022
ಹೀಗೇನೂ ಪ್ರಯಾಣ ಬೆಳೆಸಬಹುದಾ ಎಂದು ಅಂದುಕೊಳ್ಳದೆ ಇರಲು ಸಾಧ್ಯವಿಲ್ಲ. ಯಾಕಂದ್ರೆ, ಇಲ್ಲಿ ಸೈಕಲ್ ನಲ್ಲಿ ಸವಾರಿ ಮಾಡುತ್ತಿರುವವರ ಸಂಖ್ಯೆ 2 ಅಲ್ಲ 5 ಅಲ್ಲ, 9 ಜನ. ಹಿಂಭಾಗದಲ್ಲಿ ಮುಂಭಾಗದಲ್ಲಿ ಅಲ್ಲದೆ ಭುಜವನ್ನೇರಿ, ಚಕ್ರದ ಮೇಲೆ ಹೀಗೆ ಎಲ್ಲೆಂದರಲ್ಲಿ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಪುಟ್ಟ ಮಕ್ಕಳನ್ನು ಕೂರಿಸಿಕೊಂಡು ನಿಲ್ಲಿಸಿಕೊಂಡು ಈ ವ್ಯಕ್ತಿ ಸೈಕಲ್ ಓಡಿಸುತ್ತಿದ್ದಾನೆ.
BREAKING NEWS : ವೇದಿಕೆಯಲ್ಲೇ ಕೇಂದ್ರ ಸಚಿವ ‘ನಿತಿನ್ ಗಡ್ಕರಿ’ ಅಸ್ವಸ್ಥ |Union Minister Nitin Gadkari
ನೋಡಲು ಭಯ ತರಿಸುವ ಮಕ್ಕಳ ಜೀವಕ್ಕೇ ಅಪಾಯ ಎದುರಾಗುವ ಈ ವೀಡಿಯೊವನ್ನು 1.5 ಲಕ್ಷ ಜನ ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
BREAKING NEWS : ವೇದಿಕೆಯಲ್ಲೇ ಕೇಂದ್ರ ಸಚಿವ ‘ನಿತಿನ್ ಗಡ್ಕರಿ’ ಅಸ್ವಸ್ಥ |Union Minister Nitin Gadkari
ಜೈಕಿ ಯಾದವ್ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಆದರೆ, ಈ ವಿಡಿಯೋ ಯಾವ ಸ್ಥಳದ್ದು ಎಂದು ಈತನಕ ಗೊತ್ತಾಗಿಲ್ಲ. ಕೆಲವೊಬ್ಬರು ಇದು ಭಾರತದ್ದೇ ವಿಡಿಯೋ ಎಂದರೆ, ಇಲ್ಲ ಇದು ಭಾರತದ ವಿಡಿಯೋ ಅಲ್ಲ ಆಫ್ರಿಕಾದಲ್ಲಿರಬೇಕು ಎಂದಿದ್ದಾರೆ.