ಬೆಂಗಳೂರು: ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಜೊತೆಗೆ ನಟಿ ಹರಿಪ್ರಿಯ ಅವರು ವಿಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಥ್ ನೀಡುವಂತೆ ನಟಿ ಹರಿಪ್ರಿಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಹೆಸರಿನೊಂದಿಗೆ, ಮಗುವನ್ನು ಸಿಂಹ ಎತ್ತಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದು, ಈ ಮೂಲಕ ಕೆಲವು ದಿನಗಳಿಂದ ಹಬ್ಬಿದ್ದ ರೂಮರ್ಗಳಿಗೆ ಉತ್ತರವನ್ನು ಈ ಮೂಲಕ ನೀಡಿದ್ದಾರೆ.
ಅಂದ ಹಾಗೇ ಕೆಲವು ದಿನಗಳ ಇಬ್ಬರು ಕೂಡ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದುಕೊಂಡ ಸುತ್ತಾಡಿದ ಫೋಟೋಗಳು ವೈರಲ್ ಆಗಿದ್ದವು, ತಮ್ಮ ಮದುವೆಗಾಗಿ ಇಬ್ಬರು ಕೂಡ ದುಬೈಗೆ ತೆರಳಿ ಭರ್ಜಿರಿ ಶಾಪಿಂಗ್ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ಇಬ್ಬರ ಮದುವೆ ದಿನಾಂಕದ ಬಗ್ಗೆ ಇಬ್ಬರು ಶೀಘ್ರದಲ್ಲಿ ತಿಳಿಸಲಿದ್ದಾರೆ ಎನ್ನಲಾಗಿದೆ.
ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!❤️ pic.twitter.com/Q9SIzlqMEn
— HariPrriya (@HariPrriya6) December 2, 2022