ತೆಲಂಗಾಣ : ಕಾಮರೆಡ್ಡಿ ಜಿಲ್ಲೆಯ ರಾಮಾರೆಡ್ಡಿ ಮಂಡಲದ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ದೈತ್ಯಾಕಾರದ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ರಾಜು ಎಂದು ಗುರುತಿಸಲಾದ ವ್ಯಕ್ತಿ ಮಂಗಳವಾರ ಬೆಟ್ಟದ ಮೇಲಿನ ಕಂದಕಕ್ಕೆ ಬಿದ್ದಿದ್ದಾನೆ.
ನಿಜಾಮಾಬಾದ್ ಜಿಲ್ಲೆಯ ಕಾಮರೆಡ್ಡಿಯಲ್ಲಿ ಬಂಡೆಗಳ ಅಡಿಯಲ್ಲಿ ಸಿಕ್ಕಿಬಿದ್ದ ಚಿ ರಾಜು ಎಂಬ ಬೇಟೆಗಾರನೊಬ್ಬ ಆಕಸ್ಮಿಕವಾಗಿ ಕಾಲುಜಾರಿ ಬಂಡೆಗಳ ನಡುವೆ ಸಿಲುಕಿಕೊಂಡಿದ್ದನು. ಈ ಸಂದರ್ಭದಲ್ಲಿ ಆತನ ಮೊಬೈಲ್ ಫೋನ್ನಲ್ಲಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಭಯಗೊಂಡು ಹುಡುಕಿದಾಗ ಆತ ಬೃಹತ್ ಬಂಡೆಗಳ ನಡುವೆ ರಾಜು ಹೊರಗಿನಿಂದ ಭಾಗಶಃ ಗೋಚರಿಸುತ್ತಿದ್ದನು ಮತ್ತು ಅವನು ಸಹಾಯಕ್ಕಾಗಿ ಅಳುವುದು ಕೇಳಿಸಿತು.
ಕೂಡಲೇ ರಕ್ಷಣಾ ಕಾರ್ಯಾಕ್ಕಾಗಿ 18 ಗಂಟೆಗಳಿಗೂ ಹೆಚ್ಚು ಕಾಲ ಅರಣ್ಯ, ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಹೆಚ್ಚಿನ ಸಮಯ ಶ್ರಮಿಸಿದರು. ಬಳಿಕ ಯಲ್ಲರೆಡ್ಡಿ ಅರಣ್ಯ ಪ್ರದೇಶದಲ್ಲಿ ಎರಡು ಬೃಹತ್ ಬಂಡೆಗಳ ನಡುವೆ ಸಿಲುಕಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರತೆಗೆದರು. ರಾಜುವಿನ ಕುಟುಂಬಸ್ಥರು ಆತನ ರಕ್ಷಣೆಗಾಗಿ ಕಾತರದಿಂದ ಕಾಯುತ್ತಿದ್ದರು.ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದಕ್ಕೆ ಆತನನ್ನು ಸುರಕ್ಷಿತವಾಗಿ ಹೊರ ತೆಗೆಯಲು ಸಾಧ್ಯವಾಯುತು ಇದೀಗ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ
ಆತ ಬಂಡೆಕಲ್ಲಿನಲ್ಲಿ ಸಿಲುಕಿಕೊಂಡ ಅಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ
55 hours ! In a shocking incident, a man who was on a hunting spree slipped and was stuck between giant rocks in the forest area of Ramareddy Mandal in Kamareddy Dist. The man identified as Raju fell into the gap on a hillock on Tuesday. A rescue operation is underway. #Telangana pic.twitter.com/0uuBfpHyCo
— Ashish (@KP_Aashish) December 15, 2022