ಲಂಡನ್:ಭಾರತೀಯ ಚಿತ್ರರಂಗದ ಪ್ರಭಾವ ಈಗ ಜಾಗತಿಕ ನಾಯಕರ ನಡುವಿನ ಸಂಭಾಷಣೆಗೂ ಲಗ್ಗೆ ಇಟ್ಟಿದೆ. ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ಲಂಡನ್ನ ಹೈಡ್ ಪಾರ್ಕ್ನಲ್ಲಿ ಬೆಳಗಿನ ಜಾಗಿಂಗ್ ನಡೆಸುವಾಗ, ಭಾರತೀಯ ಚಿತ್ರ ‘ಧುರಂಧರ್’ (Dhurandhar) ಮತ್ತು ಅದರ ಜನಪ್ರಿಯತೆಯ ಬಗ್ಗೆ ಚರ್ಚಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲೇನಿದೆ?
ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಇಬ್ಬರೂ ನಾಯಕರು ಜಾಗಿಂಗ್ ಮಾಡುತ್ತಾ ಹರಟೆ ಹೊಡೆಯುತ್ತಿರುವುದು ಕಂಡುಬಂದಿದೆ.
ಮಾರ್ಕ್ ಕಾರ್ನೆ ಪ್ರಶ್ನೆ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು, “ಭಾರತದ ಪ್ರವಾಸದ ನಂತರ ನಿಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು ಹೇಗೆ?” ಎಂದು ಕೇಳುತ್ತಾರೆ.
ಸ್ಟಬ್ ಉತ್ತರ: ಅದಕ್ಕೆ ನಗುತ್ತಲೇ ಉತ್ತರಿಸುವ ಫಿನ್ಲೆಂಡ್ ಅಧ್ಯಕ್ಷರು, “ಅದಕ್ಕೆ ಕಾರಣ ನಾನು ‘ಧುರಂಧರ್’ ಸಿನಿಮಾ ನೋಡಿದೆ ಎಂದು ಹೇಳಿದ್ದು! ಆ ಚಿತ್ರ ನೋಡಿದ ಮೇಲೆ ಅದು ಕೇವಲ ಒಂದು ಆಟವಲ್ಲ ಎಂಬುದು ನನಗೆ ಅರ್ಥವಾಯಿತು. ಅದಕ್ಕಾಗಿಯೇ ಭಾರತದಲ್ಲಿ ನನ್ನ ಜನಪ್ರಿಯತೆ ಭಾರಿ ಪ್ರಮಾಣದಲ್ಲಿ ಹೆಚ್ಚಾಯಿತು,” ಎಂದು ಹೇಳಿದ್ದಾರೆ.
’ಧುರಂಧರ್’ ಎಫೆಕ್ಟ್:
ಭಾರತ ಭೇಟಿ: ಮಾರ್ಚ್ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಲೆಕ್ಸಾಂಡರ್ ಸ್ಟಬ್ ಅವರು, ತಮ್ಮ ಮಗನ ಸಲಹೆಯಂತೆ ತಾವು ‘ಧುರಂಧರ್’ ಸಿನಿಮಾ ನೋಡಿದ್ದಾಗಿ ತಿಳಿಸಿದ್ದರು.
ರಾಜತಾಂತ್ರಿಕ ಸಂಭಾಷಣೆಯಲ್ಲಿ ಸಿನಿಮಾ: ಸಮಾನ್ಯವಾಗಿ ಗಂಭೀರ ರಾಜಕೀಯ ಚರ್ಚೆ ನಡೆಸುವ ನಾಯಕರು, ಲಂಡನ್ನ ಪಾರ್ಕ್ನಲ್ಲಿ ಓಡುತ್ತಾ ಒಂದು ಭಾರತೀಯ ಸ್ಪೈ-ಥ್ರಿಲ್ಲರ್ ಸಿನಿಮಾದ ಬಗ್ಗೆ ಮಾತನಾಡುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಚಿತ್ರದ ಬಗ್ಗೆ: ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಭಯೋತ್ಪಾದನೆ ಮತ್ತು ಗುಪ್ತಚರ ಇಲಾಖೆಯ ಕಥಾಹಂದರ ಹೊಂದಿದ್ದು, 2025-26ರ ಸಾಲಿನ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ.
No ice-hockey rinks available, so a nice morning run in Hyde Park with Prime minister @MarkJCarney, Diana and Suzanne. pic.twitter.com/frvOts0V6v
— Alexander Stubb (@alexstubb) March 17, 2026








