ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರೀ ಬಿರುಗಾಳಿಗೆ ಸುಮಾರು 200 ವರ್ಷಗಳಷ್ಟು ಹಳೆಯ ಬೃಹತ್ ಅರಳಿ ಮರ ನೆಲಕ್ಕುರಿಳಿದ್ದು, ಮರವನ್ನ ಪರಿಶೀಲಿಸಲು ಹೋದ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಯಾಕಂದ್ರೆ, ಆ ಮರದ ಬೇರುಗಳ ಕೆಳಗೆ 5 ಶಿವಲಿಂಗಗಳ ಜತೆಗೆ ದೇವನುದೇವತೆಗಳ ವಿಗ್ರಹಗಳು ಪ್ರತ್ಯಕ್ಷ್ಯವಾಗಿವೆ. ಒಂದು ಶಿವಲಿಂಗವು ದೊಡ್ಡದಾಗಿದ್ದು, ಉಳಿದ ನಾಲ್ಕು ಚಿಕ್ಕದಾಗಿದೆ. ಸುದ್ದಿ ಹರಡುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ ಪಟ್ಟಣದ ಮುಸ್ತಫಾಬಾದ್ʼನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಸಧ್ಯ ಸ್ಥಳೀಯರು ಅಲ್ಲಿ ದೇವಸ್ಥಾನ ನಿರ್ಮಿಸಲು ಯೋಜಿಸಿದ್ದಾರೆ.
ಅಂದ್ಹಾಗೆ, ಮುಸ್ತಫಾಬಾದ್ ನಿವಾಸಿ ವಿಜಯಪಾಲ್ ಸಿಂಗ್ ಎನ್ನುವವರ ಪೂರ್ವಜರು ಸುಮಾರು 200 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಆಲದ ಮರ ನೆಟ್ಟಿದ್ದು, ಅದು ಬೃಹತ್ ಮರವಾಯಿತು. ಆದ್ರೆ, ಇತ್ತೀಚೆಗೆ ಆ ಮರ ದಿಢೀರ್ ಬಿದ್ದಿದೆ. ಗ್ರಾಮಸ್ಥರು ಮರದ ಬಳಿಗೆ ಬಂದು ನೋಡಿದಾಗ ಬೆಚ್ಚಿಬಿದ್ದರು. ಮರದ ಬುಡದಲ್ಲಿ ಐದು ಬಿಳಿ ಅಮೃತಶಿಲೆಯ ಶಿವಲಿಂಗಗಳಿವೆ. ಇದರ ಜೊತೆಗೆ ಪಾರ್ವತಿ, ನಂದಿ, ಗಣೇಶ, ಕಾರ್ತಿಕೇಯ ಮತ್ತು ಇತರ ನಾಲ್ಕು ದೇವತೆಗಳ ವಿಗ್ರಹಗಳು ಸಹ ಕಂಡುಬಂದಿವೆ ಎಂದು ಗ್ರಾಮಸ್ಥರ ಹೇಳಿದ್ದಾರೆ. ಇದನ್ನು ಶಿವನ ಮಹಿಮೆ ಎಂದು ಭಕ್ತರು ಭಾವಿಸಿದ್ದು, ಮಾಹಿತಿ ಪಡೆದು ಸುತ್ತಮುತ್ತಲ ಗ್ರಾಮಗಳ ಜನರು ಕೂಡ ಅಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಶಿವಲಿಂಗಗಳು ಬಹಿರಂಗವಾದ ಸ್ಥಳದಲ್ಲಿ ಬೃಹತ್ ದೇವಾಲಯ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಗ್ರಾಮದ ಮುಖಂಡ ಮನೋಜ್ ಯಾದವ್ ತಿಳಿಸಿದರು. ಇನ್ನು ದೇಗುಲ ನಿರ್ಮಾಣಕ್ಕೆ ಒಂದಕ್ಕಿಂತ ಹೆಚ್ಚು ಬಿಗಾ ಭೂಮಿ ನೀಡಲು ಕುಟುಂಬ ಸದಸ್ಯರು ಒಪ್ಪಿಲ್ಲ ಎಂದು ತೋಟದ ಮಾಲೀಕ ವಿಜಯಪಾಲ್ ವಿವರಿಸಿದರು.