ತಿರುಪತಿ : ತಿರುಪತಿಗೆ ಬರುವ ಭಕ್ತರಿಗೆ ಮುಖ್ಯ ಮಾಹಿತಿ ಇಲ್ಲಿದೆ, ನವೆಂಬರ್ ನಿಂದ ತಿಮ್ಮಪ್ಪನ ವಿಐಪಿ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಟಿಡಿಡಿ ಸ್ಪಷ್ಟನೆ ನೀಡಿದೆ .
ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ತೊಂದರೆ ಆಗುತ್ತಿತ್ತು. ಉಚಿತ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಈ ಬದಲಾವಣೆ ಮಾಡಲಾಗುತ್ತಿದೆ.
ನವೆಂಬರ್ 1ರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ವಿಐಪಿ ದರ್ಶನವಿದೆ. ಆದರೆ ಕೆಲವು ದಿನ ವಿಐಪಿ ದರ್ಶನ 10 ಗಂಟೆಯ ತನಕವೂ ಸಾಗುತ್ತಿತ್ತು, ಉಚಿತ ದರ್ಶನಕ್ಕೆ ಬರುವ ಭಕ್ತರು ಕಾಯಬೇಕಿತ್ತು.
ವಿಐಪಿ ದರ್ಶನಕ್ಕೆ ಮುಂಜಾನೆ ಅವಕಾಶ ನೀಡಲಾಗಿತ್ತು. ಆದರೆ ಅದೇ ವೇಳೆ ಉಚಿತ ದರ್ಶನ ಪಡೆಯುವ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದರು, ಅವರು ತಾಸುಗಟ್ಟಲೇ ಕಾಯಬೇಕಾಗುತ್ತಿತ್ತು , ಆದ್ದರಿಂದ ಟಿಟಿಡಿ ಈ ಬದಲಾವಣೆ ಮಾಡಿದೆ.
‘TRS’ ನ 20 ರಿಂದ 30 ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ : ತೆಲಂಗಾಣ ಸಿಎಂ ಕೆಸಿಆರ್ ಆರೋಪ
‘ಹಿಂದುಳಿದ ವರ್ಗಗಳ ಜನರ ಈ ಪರಿ ಬೆಂಬಲ ನೋಡಿದರೆ ನಮ್ಮ ಗೆಲುವು ಖಚಿತ’ : ಸಿಎಂ ಬೊಮ್ಮಾಯಿ |Basavaraj Bommai
ಬಿಜೆಪಿ ಸರ್ಕಾರ ದುಡ್ಡನ್ನು ಕೈಯಲ್ಲಿ ಅಲ್ಲ, ‘JCB’ ಯಲ್ಲಿ ಬಾಚುತ್ತಿದೆ : H.D ಕುಮಾರಸ್ವಾಮಿ ವಾಗ್ಧಾಳಿ