ತುಮಕೂರು: ಮನೆಯೊಂದರ ಒಳಗೆ ಕಳ್ಳತನಕ್ಕೆ ನುಗ್ಗಿ, ಚಿನ್ನಾಭರಣ ಕದಿಯುತ್ತಿದ್ದಂತ ಸಂದರ್ಭದಲ್ಲಿಯೇ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿರುವಂತ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ಹೀಗೆ ಹಿಡಿದಂತ ಕಳ್ಳರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನೆಯೊಂದಕ್ಕೆ ಆಂಧ್ರಪ್ರದೇಶದ ಚಿತ್ತೂರು ಮೂಲದ ಇಬ್ಬರು ಕಳ್ಳರು ನುಗ್ಗಿದ್ದಾರೆ. ಮನೆಯ ಒಳಗೆ ಶಬ್ದವಾಗುತ್ತಿದ್ದದ್ದು ಗಮನಿಸಿದಂತ ಗ್ರಾಮಸ್ಥರು, ಇಡೀ ಮನೆಯನ್ನೇ ಹಿಡಿಯೋದಕ್ಕೆ ಸುತ್ತುವರೆದಿದ್ದಾರೆ.
ಮನೆಯ ಒಳಗೆ ಹಣ, ಒಡವೆ ಕದ್ದು ಪರಾರಿಯಾಗೋದಕ್ಕೆ ಪ್ರಯತ್ನಿಸಿದಂತ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಸ್ಥರ ಸಮಯ ಪ್ರಜ್ಞೆ, ಸಾಹಸಕ್ಕೆ ಸಾರ್ವಜನಿಕರು, ಪೊಲೀಸರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಳ್ಳರ ಬಳಿಯಲ್ಲಿ ಹಣ, ಒಡವೆ, ಚಾಕು ಇರೋದು ಪೊಲೀಸರು ಪರಿಶೀಲನೆ ವೇಳೆಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!
ರಾಜ್ಯದ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ‘ಮಹಾತ್ಮ ಗಾಂಧಿ’ ಹೆಸರಿಡಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ








