ಸಾಗರ : ಚಿಕ್ಕ ವಯಸ್ಸಿನಲ್ಲಿ ಯುಪಿಎಸ್‌ಸಿಯಲ್ಲಿ 288ನೇ ರ‍್ಯಾಂಕ್ ಪಡೆದಿರುವುದು ದೊಡ್ಡ ಸಾಧನೆ. ನಿಮ್ಮಂತಹ ಯುವಕರಿಗೆ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಗುವಂತಾಗಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಪುರಭವನದಲ್ಲಿ ಸೋಮವಾರ ನಗರಸಭೆ ವತಿಯಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 288ನೇ ರ‍್ಯಾಂಕ್ ಗಳಿಸಿರುವ ವಿಕಾಸ್ ವಿ. ಅವರಿಗೆ ಹಮ್ಮಿಕೊಳ್ಳಲಾಗಿದ್ದ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಐಎಎಸ್ ಐಪಿಎಸ್ ಐಎಫ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಕಠಿಣವಾಗಿರುತ್ತದೆ. ಅದರಲ್ಲಿ ಯಶಸ್ವಿಯಾಗಲು ಬದ್ದತೆ ಹಾಗೂ ಏಕಾಗ್ರತೆ ಅಗತ್ಯ. ವಿಕಾಸ್ ತಂದೆತಾಯಿ ಪ್ರೊತ್ಸಾಹ, ಗುರುಹಿರಿಯರ ಮಾರ್ಗದರ್ಶನದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ನಿಮ್ಮ ಸೇವೆ ನಮ್ಮ ನೆಲಕ್ಕೆ ಸಿಗಬೇಕು ಎನ್ನುವುದು ನನ್ನ ಉದ್ದೇಶ. ಐಎಎಸ್ ಅಧಿಕಾರಿಗಳು ಆರಂಭದಲ್ಲಿ ತಗ್ಗಿಬಗ್ಗಿ ಕೆಲಸ ಮಾಡುತ್ತಾರೆ. ಕೆಲವು ವರ್ಷದ ನಂತರ ದರ್ಪ ತೋರಿಸುತ್ತಾರೆ. ಅಂತಹದ್ದಕ್ಕೆ ಅವಕಾಶ ಕೊಡದೆ ದೇಶದ ಯಾವುದೇ ರಾಜ್ಯದಲ್ಲಿ ಕೆಲಸ ಮಾಡಿದರೂ ಕರ್ನಾಟಕ ರಾಜ್ಯ, ಸಾಗರವನ್ನು ಮರೆಯಬೇಡಿ. ಇಂತಹ ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೆ ಸ್ಪೂರ್ತಿ ನೀಡಿದಂತೆ ಆಗುತ್ತದೆ ಎಂದರು.
ಅಭಿನAದನೆ ಸ್ವೀಕರಿಸಿ ಮಾತನಾಡಿದ ವಿಕಾಸ್ ವಿ, ನಾನು ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಯಲ್ಲ. ಇಂಜಿನಿಯರಿಂಗ್ ಮುಗಿಸಿ ಡಿಅರ್‌ಡಿಓನಲ್ಲಿ ಕೆಲಸ ಮಾಡುತ್ತಲೆ ನಾನು ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು 288ನೇ ರ‍್ಯಾಂಕ್‌ನಲ್ಲಿ ತೇರ್ಗಡೆಯಾಗಿದ್ದೇನೆ. ನನ್ನ ಈ ಸಾಧನೆಗೆ ಪೋಷಕರ ಜೊತೆಗೆ ಡಿಆರ್‌ಡಿಓನಲ್ಲಿ ಕೆಲಸ ಮಾಡುವ ಅನೇಕ ಐಎಎಸ್ ಅಧಿಕಾರಿಗಳು, ಗುರುಹಿರಿಯರ ಮಾರ್ಗದರ್ಶನ ಅಮೂಲ್ಯವಾದದ್ದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಅಭಿನಂದನಾ ಭಾಷಣ ಮಾಡಿದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ವಿ.ಸಿ.ಪಾಟೀಲ್, ಮಹಾಲಕ್ಷ್ಮೀ ಹೆಗಡೆ, ಪೌರಾಯುಕ್ತ ಎಚ್.ಕೆ.ನಾಗಪ್ಪ ಹಾಜರಿದ್ದರು.
BREAKING: ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಖ್ಯಾತ ಗಾಯಕ ಸೋನು ನಿಗಮ್ | Sonu Nigam
BREAKING: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮೇಜರ್ ಸರ್ಜರಿ: 16 ಸಿಬ್ಬಂದಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ