ವಿಜಯಪುರ : ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇವಾಗ ಸಿಎಂ ಸಿದ್ದರಾಮಯ್ಯ, HD ದೇವೇಗೌಡ, ಶಿವರಾಜ್ ಕುಮಾರ್ ಎಲ್ಲರ ಮಿಮಿಕ್ರಿ ಮಾಡುತ್ತಾರೆ ಮುನಿರತ್ನ ಧ್ವನಿ ಮಿಮಿಕ್ರಿ ಮಾಡೋದು ಎನ್ ದೊಡ್ಡ ಮಾತು ಎಂದು ಪರೋಕ್ಷವಾಗಿ ಮುನಿರತ್ನ ಪರ ಬ್ಯಾಟ್ ಬೀಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದು ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನ ಸೃಷ್ಟಿಸುತ್ತಾರೆ. ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದು ಹೇಳಿದ್ದು, ಆಡಿಯೋ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಹೀಗಾಗಿ ಮುನಿರತ್ನ ಪರ ಯತ್ನಾಳ್ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ್ದು, ವೈಸ್ ರೆಕಾರ್ಡ್ಗಳನ್ನು ಡೂಪ್ಲಿಕೇಟ್ ಮಾಡುತ್ತಾರೆ. ಆಡಿಯೋ ಕುರಿತು ತನಿಖೆ ಆಗಲೆಂದು ಒತ್ತಾಯಿಸುತ್ತೇನೆ. ಈಗೀಗ ಯಾರು ಬೇಕಾದರೂ ಮಿಮಿಕ್ರಿ ಮಾಡುತ್ತಾರೆ. ಶಿವರಾಜ್ ಕುಮಾರ್ ಸಿದ್ದರಾಮಯ್ಯ ದೇವೇಗೌಡ್ರು ಎಲ್ಲರದು ಮಂತ್ರಿ ಮಾಡುತ್ತಾರೆ. ಮುನಿರತ್ನ ಅವರ ಮಿಮಿಕ್ರಿ ಮಾಡೋದು ಎನ್ ದೊಡ್ಡ ಮಾತು ಎಂದು ಮುನಿರತ್ನ ಬ್ಯಾಟ್ ಬೀಸಿದ್ದಾರೆ.
ಕಾಂಗ್ರೆಸ್ನವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರು ಬೇಕಾಗಿದ್ದಾರೆ. ಮುಸ್ಲಿಮರ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಇದೆ, ಹಿಂದೂಗಳಿಗೆ ಅಲ್ಲ. ಯಾದಗಿರಿಯಲ್ಲಿ ದಲಿತ ಸಮುದಾಯದ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿದ್ದಾವೆ ಅಂತಾ ನಾನು ಕೇಳುತ್ತೇನೆ. ಕೆಲವು ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ, ಪೇಟಿಎಂ ಇದ್ದಂಗೆ, ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತಾಡುತ್ತವೆ. ಹಣ ಕಡಿಮೆ ಆಯ್ತು ಅಂದರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಅಂತಾರೆ.