ವಿಜಯಪುರ : ಮೇಯರ್ ಮೀಸಲಾತಿ ವಿಚಾರ ಕುರಿತಂತೆ ವಿಜಯಪುರ ಮೇಯರ್ ಹಾಗೂ ಉಪಮೆಯರ್ ಚುನಾವಣೆಗೆ ಸಂಬಂಧಸಿದಂತೆ ಹೈಕೋರ್ಟ್ ಮೆಟ್ಟಿಲೇರಿತ್ತು ಇದೀಗ ವಿಚಾರಣೆ ನಂತರ ಮೇಯರ್ ಚುನಾವಣೆಗೆ ಹೈಕೋರ್ಟ್ ಅನುಮತಿ ನೀಡಿದೆ ಕಲಬುರ್ಗಿ ಹೈಕೋರ್ಟ್ ಪೀಠದಿಂದ ಚುನಾವಣೆಗೆ ಹಸಿರು ನಿಶಾನೆ ದೊರಕಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಇಂದು ಚುನಾವಣೆ ನಡೆಸಲಾಗುತ್ತಿದ್ದು, ವಿಜಯಪುರ ಮಹಾನಗರ ಪಾಲಿಕೆಯು , ಒಟ್ಟು 35 ಸದಸ್ಯರ ಬಲ ಹೊಂದಿದೆ. ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರರು 5, ಎಂಐಎಂ2, ಜೆಡಿಎಸ್ ಒಂದು ಸ್ಥಾನ ಹೊಂದಿವೆ. ವಿಜಯಪುರ ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರ ರಾಜಕೀಯ ಚಾಣಾಕ್ಷತೆಯಿಂದ ಬಹುತೇಕ ಕಾಂಗ್ರೆಸ್ ನಗರ ಪಾಲಿಕೆ ಅಧಿಕಾರಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಕಾಂಗ್ರೆಸ್ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ ಕಟಕಡದೊಂಡ, ಎಂಎಲ್‌ಸಿಗಳಾದ ಸುನಿಲ್ ಗೌಡ, ಪಾಟೀಲ್ ಪ್ರಕಾಶ್ ರಾಥೋಡ್, ನಗರ ಪಾಲಿಕೆ ಸದಸ್ಯರು ಸೇರಿದಂತೆ ಕಾಂಗ್ರೆಸ್ ನಲ್ಲಿ 22 ಮತಗಳಿವೆ.
ಅದೇ ರೀತಿಯಾಗಿ ಬಿಜೆಪಿಯ 17 ಪಾಲಿಕೆ ಸದಸ್ಯರ ಪೈಕಿ ಓರ್ವ ಸದಸ್ಯ ನಿಧನರಾಗಿದ್ದಾರೆ ವಾರ್ಡ್ ನಂಬರ್ 19ರ ವಿಜಯಕುಮಾರ್ ಬಿರಾದರ್ ಎಂಬುವರು ನಿಧನರಾಗಿದ್ದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಂಸದ ರಮೇಶ್ ಜಿಗಡಗಿ ಸೇರಿ ಬಿಜೆಪಿ ಬಳಿ 18 ಮತಗಳಿವೆ. ಹೀಗಾಗಿ 22 ಮತಗಳನ್ನು ಹೊಂದಿರುವ ಕಾಂಗ್ರೆಸ್ ಬಹುತೇಕ ನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ.