ವಿಜಯಪುರ : ವಿಜಯಪುರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಯುವತಿಗೆ ಪ್ರೀತಿ ಹೆಸರು ಹೇಳಿ ಅವಳ ಜೊತೆ ದೈಹಿಕ ಸಂಪರ್ಕವನ್ನು ಕೂಡ ಬೆಳೆಸಿ ಇದೀಗ ಲವ್ ಸೆಕ್ಸ್ ದೋಖಾ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಕಾನ್ಸ್ಟೇಬಲ್ ಒಬ್ಬ ಯುವತಿಗೆ ವಂಚಿಸಿದ ಘಟನೆ ನಡೆದಿದ್ದು, ಯುವತಿಗೆ ಕಾನ್ಸ್ಟೇಬಲ್ ವಿನಾಯಕ ಟಕ್ಕಳಕಿ ಎನ್ನುವ ವ್ಯಕ್ತಿ ವಂಚಿಸಿದ್ದಾನೆ. ಕಾನ್ಸ್ಟೇಬಲ್ ವಿನಾಯಕ್ ಟಕ್ಕಳಕಿ ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ ಎಂದು ಹೇಳಲಾಗುತ್ತಿದೆ.
ಮದುವೆ ಆಗುತ್ತೇನೆ ಎಂದು ಕಾನ್ಸ್ಟೇಬಲ್ ದಹಿಕ ಸಂಪರ್ಕ ಮಾಡಿದ್ದ ಆದರೆ ಇದೀಗ ಮದುವೆಗೆ ವಿನಾಯಕ ವಿರೋಧಿಸುತ್ತಿದ್ದಾನೆ. ಕಾನ್ಸ್ಟೇಬಲ್ ವಿನಾಯಕ ವಿರೋಧ ವ್ಯಕ್ತಪಡಿಸಿದ್ದ. ಎಂದು ಯುವತಿಯು ಆರೋಪಿಸಿದ್ದಾಳೆ. ವಿಜಯಪುರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ 20 ದಿನಗಳಿಂದ ಸೇವೆಗೆ ವಿನಾಯಕ್ ಬಂದಿಲ್ಲ ಎಂದು ತಿಳಿದು ಬಂದಿದೆ.