ವಿಜಯಪುರ : ಕಳೆದ ಏಪ್ರಿಲ್ ಮೂರರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಚ್ಯಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕ್ ನನ್ನು ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಇಂದು ಸಾತ್ವಿಕ್ ಎಲ್ಲಾ ವೈದ್ಯಕೀಯ ವರದಿಗಳು ನಾರ್ಮಲ್ ಆಗಿರುವುದರಿಂದ ಸಾತ್ವಿಕ್ನನ್ನು ಆಸ್ಪತ್ರೆಗೆ ಸಿಬ್ಬಂದಿಗಳು ಕೇಕ್ ಕತ್ತರಿಸುವ ಮೂಲಕ ಬೀಳ್ಕೊಡು ಘಟನೆ ನಡೆಯಿತು. ತೆರೆದ ಕೊಳವೆಬಾವಿಯಿಂದ ಎರಡು ವರ್ಷದ ಸಾತ್ವಿಕ್ ರಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ ಐ ಸಿ ಯು ನಲ್ಲಿ ಕೆ ಕತ್ತರಿಸಿ ಮಗುವನ್ನು ಬೀಳ್ಕೊಟ್ಟ ವೈದ್ಯ ಸಿಬ್ಬಂದಿ.
ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಾತ್ವಿಕ್ ನನ್ನು ಕೊಳವೆಬಾವಿಯಿಂದ ರಕ್ಷಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ಸ್ಥಳಂತರಿಸಿ ಟೆಸ್ಟ್ ಮಾಡಲಾಗಿತ್ತು. ಎಲ್ಲಾ ಟೆಸ್ಟ್ ವರದಿ ನಾರ್ಮಲ್ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಏಪ್ರಿಲ್ ಮೂರರಂದು ಇಂಡಿ ತಾಲೂಕಿನ ಲಚ್ಚಣ ಗ್ರಾಮದಲ್ಲಿ ಸಾತ್ವಿಕ್ ತೆರೆದು ಕೊಳವೆ ಬಾವಿಗೆ ಬಿದ್ದಿದ್ದ.