ವಿಜಯಪುರ : ಮದುವೆಯಾದ ಬಳಿಕ ನನ್ನ ಗಂಡ ವರದಕ್ಷಿಣೆ ಕಿರುಕುಳ ಅಲ್ಲದೆ ದೈಹಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ಕಾನ್ಸ್ಟೇಬಲ್ ವಿರುದ್ಧ ಇದೀಗ ಪತ್ನಿಯಿಂದಲೇ ದೂರು ಸಲ್ಲಿಕೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿಯಲ್ಲಿ ನಡೆದಿದೆ.
ವರದಕ್ಷಣೆ ಕಿರುಕುಳ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಇದೀಗ ಕಾನ್ಸ್ಟೇಬಲ್ ಪತ್ನಿ ದೂರು ನೀಡಿದ್ದಾರೆ. ಪತ್ನಿಯ ದೂರಿನ ಮೇರೆಗೆ ಇದೀಗ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಲಕೇರಿ ಠಾಣೆ ಪೊಲೀಸ್ ಕಾನ್ಸ್ಟೇಬಲ್ ರೇವಣಸಿದ್ದಪ್ಪ ಕೆಂಚಗೊಂಡ ವಿರುದ್ಧ ಇದೀಗ ಎಫ್ ಆರ್ ದಾಖಲಾಗಿದೆ.ಜಮಖಂಡಿ ಗ್ರಾಮದ ಜಗದೇವಿಯಿಂದ ಪತಿ ವಿರುದ್ಧ ದೂರು ದಾಖಲಾಗಿದೆ.
ಜಗದೇವಿ ಮೂಲತಃ ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಜಮಖಂಡಿ ಗ್ರಾಮದವರು ಎಂದು ತಿಳಿದುಬಂದಿದೆ. 3 ವರ್ಷದ ಹಿಂದೆ ರೇವಣಸಿದ್ದಪ್ಪ ಜೊತೆ ಜಗದೇವಿ ಮದುವೆಯಾಗಿದ್ದರು.ಮದುವೆ ಬಳಿಕ ನಿರಂತರ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ಇದೀಗ ದೂರು ಸಲ್ಲಿಸಿದ್ದಾರೆ. ಈ ಕುರಿತು ಎಷ್ಟೇ ಬಾರಿ ರಾಜಿ ಪಂಚಾಯಿತಿ ಮಾಡಿದರು ಕೂಡ ಮತ್ತೆ ಕಿರುಕುಳ ನೀಡುತ್ತಲೇ ಇದ್ದ ಪತಿ ರೇವಣಸಿದ್ದಪ್ಪ ವಿರುದ್ಧ ಇದೀಗ ಪತ್ನಿ ಜಗದೇವಿ ಠಾಣೆಯ ಮೆಟ್ಟಿಲು ಏರಿದ್ದಾರೆ.