ವಿಜಯಪುರ : ವಿಡಿಯೋ ಕಾಲ್ ಮೂಲಕ ಆನ್ಲೈನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ, ಬೆದರಿಕೆ ಹಾಕಿ ವಂಚನೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಸಂತೋಷಗೆ ಚೌಧರಿಗೆ ಮುಂಬೈನ ಕ್ರೈಂ ಬ್ರಾಂಚ್ ನ ನಕಲಿ ಪೊಲೀಸ್ ವಿರುದ್ಧ ಇದೀಗ ದೂರು ದಾಖಲಾಗಿದೆ.
ವಿಜಯಪುರ ನಗರದ ಸಂತೋಷ್ ಚೌಧರಿಗೆ ವಿಡಿಯೋ ಕಾಲ್ ಮಾಡಿ ಆನ್ ಲೈನ್ ವಂಚನೆಗೆ ಯತ್ನ ನಡೆಸಿರುವ ಆರೋಪ ಕೇಳಿಬಂದಿದ್ದು, ಸಂತೋಷ್ಗೆ ವಿಡಿಯೋ ಕಾಲ್ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿ ಹಣಕ್ಕೇ ಬೇಡಿಕೆ ಇಟ್ಟಿದ್ದಾನೆ ಎಂದು ಸಂತೋಷ್ ಆರೋಪಿಸಿದ್ದಾರೆ. ಅಲ್ಲದೆ ವಿಡಿಯೋ ಕರೆ ಸ್ಕ್ರೀನ್ ರೆಕಾರ್ಡ್ ಮಾಡಿದ್ದಾನೆ.
ನಿಮ್ಮ ಮೊಬೈಲ್ ನಂಬರ್ ವಿರುದ್ಧ 17 ಕೇಸ್ ದಾಖಲಾಗಿವೆ. ವಿಚಾರಣೆಗೆ ಹಾಜರಾಗಲು ಮುಂಬೈಗೆ ಬನ್ನಿ ಎಂದು ವಂಚಕ ಸಂತೋಷ್ ಚೌದರಿಗೆ ಹೇಳಿದ್ದಾನೆ.ಅಶ್ಲೀಲವಾಗಿ ನಿಂದಿಸಿ ನಕಲಿ ಪೊಲೀಸ್ ಅಧಿಕಾರಿ ಸಂತೋಷ್ಗೆ ಬೆದರಿಕೆ ಹಾಕಿದ್ದಾನೆ. ಆಧಾರ್ ನಂಬರ್ ಕೆಲ ಓಟಿಪಿ ಪಡೆಯಲು ವಂಚಕ ಯತ್ನಿಸಿದ್ದಾನೆ. ಕ್ರೈಂ ಬ್ಯಾಂಚ್ ಪೊಲೀಸರ ಯೂನಿಫಾರ್ಮ್ ನಲ್ಲಿ ಕಾಲ್ ಮಾಡಿದ್ದ ಎನ್ನಲಾಗಿದೆ. ಇದೀಗ ಸಂತೋಷ್ ವಿಜಯಪುರ ಸೆನ್ ಠಾಣೆಗೆ ದೂರು ನೀಡಿದ್ದಾನೆ.