ವಿಜಯಪುರ: ಜಿಲ್ಲೆಯ ಭೀಮಾತೀರದಲ್ಲಿ ಮತ್ತೆ ರಕ್ತಪಾತ ಹರಿದಿದೆ. ಜಿಲ್ಲೆಯ ದೇವರನಿಂಬರಗಿ ಗ್ರಾಮದಲ್ಲಿ ಅಣ್ಣನನ್ನು ತಮ್ಮನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ದೇವರನಿಂಬರಗಿ ನಿವಾಸಿ ಜಗ್ಗೇಶ್ ವಡ್ಡರ್ ಮೃತ ದುರ್ದೈವಿ. ರಾಹುಲ್ ವಡ್ಡರ್ ಎಂಬಾತನಿಂದ ದುಷ್ಕೃತ್ಯ ನಡೆದಿದೆ.
ಅಣ್ಣ ಜಗ್ಗೇಶ್ ಪ್ರತಿನಿತ್ಯ ಕುಡಿಯಲು ತಮ್ಮ ಹತ್ರ ಹಣ ಕೇಳುತ್ತಿದ್ದನು. ಇದರಿಂದ ಬೇಸತ್ತ ತಮ್ಮ ರಾಹುಲ್ ಮಾರಕಾಸ್ತ್ರದಿಂದ ಚುಚ್ಚಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಚಡಚಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಇದೇ ತಿಂಗಳು 1ರಂದು ಟಿಪ್ಪು ಸುಲ್ತಾನ್ ಹಾಗೂ ಶಿವಾಜಿ ಮಹಾರಾಜ್ ವೃತ್ತ ನಿರ್ಮಾಣ ವಿಚಾರದಲ್ಲಿ ಗಲಾಟೆ ನಡೆದಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಪ್ರಶಾಂತ್ ಕ್ಷತ್ರಿ ಎಂಬ ಯುವಕನನ್ನು 8 ಮಂದಿ ಬರ್ಬರವಾಗಿ ಹತ್ಯೆ ಮಾಡಿದ್ದರು.