ವಿಜಯಪುರ : ಮೇವಿನ ಬಣವೆಯನ್ನು ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಿ ಕುಪಿತಗೊಂಡ ಮೂವರು ದೂರರು 70 ವರ್ಷದ ವೃದ್ಧನನ್ನು ಕನಿಕರವಿಲ್ಲದೆ ಉರಿಯುವ ಬೆಂಕಿಗೆ ಎಸೆದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳದಲ್ಲಿ ನಡೆದಿದೆ.
ಮೆಕ್ಸಿಕನ್ ಉದ್ಯಮಿ ‘ಗ್ರೇಸಿಯಾ ಮುನೋಜ್’ ರನ್ನು ಮದುವೆಯಾದ ‘ಜೊಮ್ಯಾಟೊ ಸಿಇಒ’ ದೀಪಿಂದರ್ ಗೋಯಲ್
ಹೌದು ಈ ಘಟನೆಯು ಮಾರ್ಚ್ 15 ರಂದು ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಹಲ್ಲೆಗೆ ಒಳಗಾದ ವೃದ್ಧನನ್ನು ದುಂಡಪ್ಪ ಎಂದು ಹೇಳಲಾಗುತ್ತಿದ್ದು, ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಬಂಧಿತ ಆರೋಪಿಗಳು. ಇನ್ನೂ ಮೂವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಕಲಿ ಜಾತಿ ‘ಪ್ರಮಾಣಪತ್ರ’ ಪಡೆದವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ವೃದ್ಧ ದುಂಡಪ್ಪ ತನ್ನ ಹೊಲದಲ್ಲಿರುವ ಕಬ್ಬಿನ ರವರಿಗೆ ಬೆಂಕಿ ಹಚ್ಚಿದ್ದಾನೆ ಈ ವೇಳೆ ಗಾಳಿಗೆ ಬೆಂಕಿಯ ಕಿಡಿ ಪಕ್ಕದ ಜಮೀನಿನಲ್ಲಿರುವ ಮಲ್ಲಪ್ಪ ಆಸಂಗಿ ಮೇವಿನ ಬಣವೆಗೆ ಬಿದ್ದಿದೆ.ಈ ವೇಳೆ ವೃದ್ಧ ದುಂಡಪ್ಪ ಹರಿಜನ ಅವರು ಆಕಸ್ಮಿಕವಾಗಿ ಬೆಂಕಿ ಗಾಳಿಗೆ ಹಾರಿ ಬಂದು ಈ ಅವಘಡವಾಗಿದೆ. ನಿಮಗೆ ಪರಿಹಾರ ನೀಡುತ್ತೇನೆ. ಮೇವಿನ ಬದಲಾಗಿ ಮೇವು ನೀಡುತ್ತೇನೆ. ಇಲ್ಲವೇ ಸುಟ್ಟ ಮೇವಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದಾರೆ.
ಸಹಕಾರಿ ಬ್ಯಾಂಕ್ ನೌಕರರ ‘ವೇತನ ಕಡಿತ’ ನಿಷೇಧಿಸಿ ಹೊರಡಿಸಿದ್ದ ‘ಸಿಎಜಿ’ ಸುತ್ತೋಲೆಯನ್ನು ರದ್ದುಗೊಳಿಸಿದ ಹೈಕೋರ್ಟ್
ಆದರೂ ಕೇಳದೆ ಸಿಟ್ಟಾದ ಮಲ್ಲಪ್ಪ ಹಾಗೂ ಆತನ ಸಂಬಂಧಿಕರು ನಮ್ಮ ಮೇವಿನ ಬಣಿವೆಗೆ ಬೆಂಕಿ ಹಾಕಿದ್ದಿಯಾ, ನಿನ್ನನ್ನು ಸುಟ್ಟು ಹಾಕುತ್ತೇವೆ ಎಂದು ವೃದ್ಧ ದುಂಡಪ್ಪನನ್ನು ಎತ್ತಿ ಉರಿಯುವ ಬೆಂಕಿಗೆ ಎಸೆದಿದ್ದಾರೆ. ಈ ವೇಳೆ ದುಂಡಪ್ಪನ ಬೆನ್ನು ಹಾಗೂ ಕೈಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು, ದುಂಡಪ್ಪ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಆರು ಜನರ ಮೇಲೆ ವೃದ್ಧ ದುಂಡಪ್ಪ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.