ವಿಜಯಪುರ : ಕಾಲುವೆಗೆ ಬಿದ್ದಂತಹ ಮೇಕೆ ಮರಿಯನ್ನು ರಕ್ಷಿಸಲು ಕಾಲುವೆಗೆ ಜಿಗಿದ ಕುರಿಗಾರಿ ಒಬ್ಬ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ನಾಗಬೇನಾಳ ಬಳಿ ನಡೆದಿದೆ.
ನೀರುಪಾಲಾದ ಕುರಿಗಾಹಿಯನ್ನು ನಾಗಬೇನಾಳ ಗ್ರಾಮದ ಮಂಜುನಾಥ್ ಮಾದರ(28) ಎಂದು ಗುರುತಿಸಲಾಗಿದೆ. ಕುರಿಕಾಯಲು ನಾಗಬೇನಾಳ ಸಮೀಪದ ಚಕ್ ಪೋಸ್ಟ್ ಹತ್ತಿರದ ನಾರಾಯಣಪೂರ ಎಡದಂಡೆ ಕಾಲುವೆ ಬಳಿ ಕುರಿಕಾಯುತ್ತಿದ್ದ. ಈ ಸಮಯದಲ್ಲಿ ಕುರಿ ಮರಿಯೊಂದು ಜಾರಿ ಕಾಲುವೆಗೆ ಬಿದ್ದಿದೆ.
ಆ ಮರಿಯನ್ನು ರಕ್ಷಣೆ ಮಾಡಲು ಮಂಜುನಾಥ ಕಾಲುವೆ ಜಿಗಿದಿದ್ದು, ಕುರಿ ಮರಿಯನ್ನು ರಕ್ಷಣೆ ಮಾಡಿ ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ. ಘಟನಾ ಸ್ಥಳದಲ್ಲಿ ಬಾಗೇವಾಡಿಯ ಪೊಲೀಸರು ಭೇಟಿ ನೀಡಿ ಪರಿಶೀಲ ನಡೆಸುತ್ತಿದ್ದು ಅಗ್ನಿಶಾಮಕ ದಳ ತಂಡದವರು ಕೂಡ ಆಗಮಿಸಿ ಮಂಜುನಾಥನ ಶುಭ ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.