ವಿಜಯಪುರ : ಯುವಕರ ಗ್ಯಾಂಗ್ ಒಂದು ಓರ್ವನಿಗೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ರಂಭಾಪುರ ಬಡಾವಣೆ ಬಳಿ ಈ ಒಂದು ಘಟನೆ ನಡೆದಿದ್ದು ಪೈಗಂಬರ್ ಎಂಬ ಯುವಕನ ಮೇಲೆ ಐದಾರು ಜನ ಯುವಕರ ಗ್ಯಾಂಗ್ ಹಲ್ಲೆ ಮಾಡಿದೆ.
ಪೈಗಂಬರ್ ಮುಲ್ಲಾ ಕಲ್ಬುರ್ಗಿಯ ಶಹಬಾದ್ ನಲ್ಲಿ ನೆಲೆಸಿದ್ದ. ಹತ್ಯೆಯಾದ ರೌಡಿಶೀಟರ್ ಹೈದರ್ ನದಾಫ್ ನಿಕಟ ವರ್ತಿ ಎಂದು ತಿಳಿದು ಬಂದಿದೆ. ನದಾಫ್ ಹತ್ಯೆಯ ಬಳಿಕ ಪೈಗಂಬರ್ ಶಹಾಬಾದ್ ಗೆ ಬಂದು ನೆಲೆಸಿರುತ್ತಾನೆ. ವಿಜಯಪುರದ ಯುವಕರ ಗ್ಯಾಂಗ್ ಪೈಗಂಬರ ಮೇಲೆ ಹಲ್ಲೆ ಮಾಡಿದೆ. ಹಳೆ ವೈಷಮ್ಯ ಕಾರಣಕ್ಕಾಗಿ ಪೈಗಂಬರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಆದರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








