ವಿಜಯನಗರ : ತನಗೇ ಯಾರು ಹುಡುಗಿ ಕೊಡುತ್ತಿಲ್ಲ ಎಂದು ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆಯ ಗ್ರಾಮದ ಬಿ ಮಧುಸೂದನ್ (26) ಸಾವನ್ನಪ್ಪಿರುವ ಯುವಕನಾಗಿದ್ದಾನೆ.ಹುಡುಗನ ತಂದೆಯ ವರ್ತನೆ ಸರಿ ಇಲ್ಲ ಎಂದು ಹೆಣ್ಣು ಕೊಡುವವರು ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಹುಡುಗಿ ಕೊಡಲು ನಿರಾಕರಿಸಿದಕ್ಕೆ ಯುವಕ ಮನನೊಂದಿದ್ದ.
ಕನ್ಯೆ ಸಿಗದಿದ್ದಕ್ಕೆ ಬಿ ಮಧುಸೂದನ್ ಕುಡಿತದ ಚಟಕ್ಕೆ ಕೂಡ ಬಿದ್ದಿದ್ದ ಎನ್ನಲಾಗುತ್ತಿದೆ. ನನಗೆ ಮದುವೆನೇ ಆಗಲ್ಲ ಎಂದು ಮಧುಸೂದ ಮನನೊಂದು ವಿಷಯ ಸೇವಿಸಿದ್ದ.ಜನವರಿ 5ರಂದು ಮಧುಸೂದನ್ ವಿಷ ಸೇವಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ, ಗುಡೆಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.