ವಿಜಯನಗರ : ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ, ಪ್ರಿಯಕರನೊಬ್ಬ ಯುವತಿಗೆ ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರಸಭೆ ಕಾರ್ಯಾಲಯ ಎದುರುಗಡೆ ನಡೆದಿದೆ.
ಹಲ್ಲೆಗೆ ಒಳಗಾದ ಯುವತಿಯನ್ನು ಭಾರತಿ ಶಾವಿ(26) ಎಂದು ತಿಳಿದುಬಂದಿದೆ. ಇನ್ನು ವಿಜಯಭಾಸ್ಕರ್(26) ಹಲ್ಲೆ ಮಾಡಿದ ಪ್ರೇಮಿ ಎನ್ನಲಾಗಿದೆ. ಕಳೆದ 10 ವರ್ಷಗಳಿಂದ ಯುವತಿ ಭಾರತಿ ಹೊಸಪೇಟೆಯಲ್ಲಿ ತಂದೆ-ತಾಯಿ ಜೊತೆ ವಾಸವಿದ್ದಳು. 5 ವರ್ಷಗಳ ಹಿಂದೆ ಯುವಕನ ಜೊತೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿ ಇಬ್ಬರಿಗೂ ಲವ್ ಆಗಿತ್ತು. ಆ ಬಳಿಕ ಯುವತಿ ಆಂಧ್ರದ ಸ್ವಗ್ರಾಮಕ್ಕೆ ಹೋದಾಗಲೆಲ್ಲಾ ತೀರಾ ಸಲುಗೆಯಿಂದ ಇರ್ತಿದ್ರು.
ಇತ್ತೀಚೆಗೆ ಯುವತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಅಂತರ ಕಾಯ್ದುಕೊಂಡಿದ್ದಲ್ಲದೇ ಭಾರತಿ, ವಿಜಯಭಾಸ್ಕರ ಪ್ರೀತಿ ನಿರಾಕರಿಸಿದ್ದಳು. ಯುವತಿಯು ಮದುವೆಗೆ ನಿರಾಕರಿಸಿದಕ್ಕೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದಿಂದ ಹೊಸಪೇಟೆ ನಗರಕ್ಕೆ ಆಗಮಿಸಿದ ಯುವಕ ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಹೊಸಪೇಟೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.