ವಿಜಯನಗರ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಕೂಲಿ ಕಾರ್ಮಿಕ ಹಾಗೂ ಆಕಳು ಸಾವನ್ನಪ್ಪಿದೆ. ಸಿಡಿಲಿಗೆ ಕೂಲಿಕಾರ್ಮಿಕ ಬೆಂಡಿಗೇರಿ ಹಾಲೇಶಪ್ಪ (48) ಸಾವನ್ನಪ್ಪಿದ್ದು ಕೊಳದಲ್ಲಿ ಆಗುವ ಮೀಸಲು ಹೋಗಿದ್ದಾಗ ಈ ಒಂದು ದುರ್ಘಟನೆ ಸಂಭವಿಸಿದೆ.
ಇನ್ನು ರಾಯಚೂರಿನಲ್ಲಿ ಕೂಡ ದೇವಸ್ಥಾನಕ್ಕೆ ಇಂದು ಕುಟುಂಬದ ಸಮೇತ ಬಂದಿದ್ದ ಸಾಯಣ್ಣ ಎಂಬ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದು, ಅವರ ಪತ್ನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆ.ಗುಡದಿನ್ನಿ ಎಂಬಲ್ಲಿ ನಡೆದಿದೆ. ಸದ್ಯ ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ.