ವಿಜಯನಗರ : ಪ್ರತಿದಿನ ಕುಡಿದು ಬಂದು ಪತ್ನಿಯ ಜೊತೆಗೆ ಪತಿ ಜಗಳವಾಡುತ್ತಿದ್ದ, ಇದರಿಂದ ಬೇಸತ್ತು ಪತ್ನಿ ಹಾಗೂ ಪತಿ ಇಬ್ಬರೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಡೆದಿದೆ.
ನಗರದ ರಾಮರಹಿಂ ನಿವಾಸಿಗಳಾದ ಮಂಜುನಾಥ (28 )ಗೀತಾ (25) ಕೌಟುಂಬಿಕ ಕಲಹದಿಂದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಪತಿ ಮಂಜುನಾಥ್ ದಿನವು ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡಿ ಗಲಾಟೆ ಮಾಡುತ್ತಿದ್ದ.
ನಿನ್ನೆ ರಾತ್ರಿ ಕೂಡ ಇದೇ ರೀತಿ ಪುನರಾವರ್ತನೆಯಾದಾಗ ಮಂಜುನಾಥ್ ಮತ್ತು ಗೀತಾ ಇಬ್ಬರೂ ನೇಣು ಬಿಗಿದುಕೊಂಡು ಆ ಮಾತೆಗೆ ಶರಣಾಗಿದ್ದಾರೆ. ಘಟನೆ ಕುರಿತಂತೆ ಹಗರಿಬೊಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.