ವಿಜಯನಗರ : ಅಯೋಧ್ಯೆಯ ಶ್ರೀ ರಾಮನ ದರ್ಶನ ಪಡೆದು ತಮ್ಮೂರಿನತ್ತ ವಾಪಸ್ಸು ತೆರಳುತ್ತಿರುವ ಸಂದರ್ಭದಲ್ಲಿ ಅವರಿದ್ದ ಬೋಗಿಗೆ ಅನ್ಯ ಕೋಮುವಿನ ಕೆಲವು ಯುವಕರು ಆಗಮಿಸಿದ್ದಾರೆ. ಈ ವೇಳೆ ಯುವಕರ ಹಾಗೂ ಯಾತ್ರಿಕರ ನಡುವೆ ವಾಗ್ವಾದ ನಡೆದಿದ್ದು, ಯುವಕರು ಭೋಗಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ನಡೆದಿದೆ.
BREAKING: ಚಂದ್ರನ ಮೇಲೆ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ಯುಎಸ್ ಬಾಹ್ಯಾಕಾಶ ನೌಕೆ ‘ಒಡಿಸ್ಸಿಯಸ್’ |Odysseus
ಅಯೋಧ್ಯೆ ಪ್ರಭು ಶ್ರೀರಾಮರ ದರ್ಶನ ಪಡೆದು ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಮೂವರು ಯುವಕರು ಬೋಗಿ ನಂ 2 ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನ ಹತ್ತಲು ಮುಂದಾಗಿದ್ದಾರೆ. ಯಾತ್ರಿಕರು ಯುವಕರನ್ನ ತಡೆದು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ತಿಳಿ ಹೇಳಿದ್ದಾರೆ.
BIG NEWS : ‘ಭ್ರೂಣ ಹತ್ಯೆ’ ಪ್ರಕರಣ : ಸ್ಕ್ಯಾನಿಂಗ್ ಮಷಿನ್‌ಗಳನ್ನು ಪೂರೈಸಿದ ಇಬ್ಬರನ್ನು ಬಂಧಿಸಿದ ‘CID’
ಆದರೆ ಆ ಯುವಕರು ಯಾತ್ರಿಕರ ಮಾತು ಕೇಳಿದೆ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ರೈಲು ಏನು ನಿಮ್ಮ ಅಪ್ಪನ ಮನೆದಲ್ಲ. ಇದಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇವೆ ಅಂತಾ ಅಂದಿದ್ದಾರಂತೆ. ಯಾತ್ರಿಕರು ತಕ್ಷಣ ರೈಲ್ವೆ ಪೊಲೀಸ್‌ರನ್ನ ಕರೆಸಿ ಅವರಿಗೆ ಯುವಕರನ್ನ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಆ ಮೂವರು ಯುವಕರು ಯಾತ್ರಿಕರು ಇರುವ ಈ ಬೋಗಿಗೆ ಬೆಂಕಿ ಹಚ್ಚುತ್ತೆವೆ ಎಂದು ಮತ್ತೆ ಧಮ್ಕಿ ಹಾಕಿದ್ದಾರೆ. ಯಾವಾಗ ಬೋಗಿಗೆ ಬೆಂಕಿ ಹಚ್ಚುತ್ತೆವೆ ಅಂತಾ ಅಂದ್ರು ಆಗಲೇ ಯಾತ್ರಿಕರು ಕೋಪಗೊಂಡಿದ್ದಾರೆ.
ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ‘ಜೀವನಾಂಶ’ ನೀಡುವಂತೆ ‘ಪತ್ನಿ’ಗೆ ಕೋರ್ಟ್ ಆದೇಶ
ಜೊತೆಗೆ ಎಸ್ಪಿ ಸ್ಥಳಕ್ಕೆ ಆಗಮಿಸಿ ಧಮ್ಕಿ ಹಾಕಿದ ಕಿಡಗೇಡಿಗಳ ಬಂಧಿಸಬೇಕು ಎಂದು ಹಿಂದೂ ಕಾರ್ಯಕರ್ತರು, ಭಜರಂಗ ದಳ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಬಳಿಕ ವಿಜಯನಗರ ಜಿಲ್ಲೆ ಎಸ್ಪಿ ಶ್ರೀಹರಿಬಾಬು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಕಿಡಿಗೇಡಿಗಳ ಬಂಧಿಸುತ್ತೆವೆ. ಈ ಕೂಡಲೇ FIR ಹಾಕುತ್ತೆವೆ ಎಂದು ಹೇಳಿದ್ದಾರೆ. ರೈಲು ಪ್ರಯಾಣ ಮುಂದುವರೆಯುವಂತೆ ಯಾತ್ರಿಕರ ಮನವೊಲಿಸುವಲ್ಲಿ ಯಶಸ್ವಿಯಾಗಿ ಅವರನ್ನ ಕಳಿಸಿದ್ದಾರೆ.