ನವದೆಹಲಿ: ರಕ್ಷಣಾ ಡೀಲರ್ ಸಂಜಯ್ ಭಂಡಾರಿ, ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಕಿಂಗ್ ಫಿಶರ್ ಏರ್ ಲೈನ್ಸ್ ಪ್ರವರ್ತಕ ವಿಜಯ್ ಮಲ್ಯ ಸೇರಿದಂತೆ ಭಾರತದ ಮೋಸ್ಟ್ ವಾಂಟೆಡ್ ದೇಶಭ್ರಷ್ಟರನ್ನು ಹಸ್ತಾಂತರಿಸಲು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಯುಕೆಗೆ ತೆರಳಲಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್ಎಟಿ) ಅಡಿಯಲ್ಲಿ ಯುಕೆ ಅಧಿಕಾರಿಗಳೊಂದಿಗೆ ಬಾಕಿ ಇರುವ ದೀರ್ಘಕಾಲದ ಮಾಹಿತಿಯ ವಿನಿಮಯಕ್ಕೆ ಸಂಬಂಧಿಸಿದಂತೆ ಲಂಡನ್ಗೆ ತೆರಳುವ ತಂಡವು ದ್ವಿಪಕ್ಷೀಯ ಚರ್ಚೆಗಳಲ್ಲಿ ತೊಡಗಲಿದೆ ಎಂದು ತಿಳಿದುಬಂದಿದೆ. ಎಂಎಲ್ಎಟಿಗೆ ಸಹಿ ಹಾಕಿರುವುದರಿಂದ, ಯುಕೆ ಮತ್ತು ಭಾರತ ಎರಡೂ ಆರ್ಥಿಕ ಅಪರಾಧಿಗಳು ಮತ್ತು ಇತರರನ್ನು ಒಳಗೊಂಡ ಕ್ರಿಮಿನಲ್ ತನಿಖೆಗಳ ಮಾಹಿತಿಯನ್ನು ಕಾನೂನುಬದ್ಧವಾಗಿ ಹಂಚಿಕೊಳ್ಳಲು ಬದ್ಧವಾಗಿವೆ. ಎನ್ಐಎ ತಂಡವು ಪ್ರಸ್ತುತ ಖಲಿಸ್ತಾನಿ ಚಳವಳಿಗೆ ಸಂಬಂಧಿಸಿದ ಅನೇಕ ಭಯೋತ್ಪಾದಕ ಶಂಕಿತರ ಬಗ್ಗೆ ತನಿಖೆ ನಡೆಸುತ್ತಿದೆ.