ಯುಎಇ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗುರುವಾರ ಭಾರೀ ಮಳೆಯಾಗಿದ್ದು, ಪರಿಣಾಮ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗದೆ. ಶಾರ್ಜಾ ಮತ್ತು ಫುಜೈರಾದಿಂದ ರಕ್ಷಣಾ ತಂಡ ಜನರನ್ನು ರಕ್ಷಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿವೆ.
Fujairah UAE ~ Floods ! pic.twitter.com/6m8evlzgwZ
— Rehman A (@rehmanspore) July 28, 2022
ಮಳೆಯಿಂದಾಗಿ ಎರಡು ನಗರಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದ್ದು, ವಿಶೇಷವಾಗಿ ಫುಜೈರಾ ಅದರ ಪರ್ವತ ಭೂಪ್ರದೇಶ ಮತ್ತು ಕಣಿವೆಗಳಲ್ಲಿ ಅಪಾರ ಹಾನಿಯಾಗಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಕಡಿಮೆ ಮಳೆಯಾಗಿದ್ದು,ಪ್ರವಾಹದಿಂದ ಪಾರಾಗಲು ಅನೇಕ ಜನರು ಹೋಟೆಲ್ಗಳು ಮತ್ತು ಇತರ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿದೆ.
ಪ್ರವಾಹದ ಕುರಿತಾದ ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಫುಜೈರಾದ ಬೀದಿಗಳಲ್ಲಿ ನಿಲ್ಲಿಸಿದ ಕಾರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವುದನ್ನು ತೋರಿಸುತ್ತವೆ. ಇದು ಈಗಾಗಲೇ ಕಲ್ಬಾ ಮಾರುಕಟ್ಟೆಯಲ್ಲಿ ಖಾಲಿ ಅಂಗಡಿಗಳನ್ನು ಪ್ರವೇಶಿಸುತ್ತಿದೆ.
Entrance to the Emirate of Fujairah, next to the flagpole.
The flood caused a lot of damage#UAE #EmiratesRain #Fujairah #الامارات #السياق #امطار_الامارات #الفجيرة #الامارات_اليمن #چوہدریپرویز #Flood #FloodSituation pic.twitter.com/n1qm4AZlIc— Siraj Noorani (@sirajnoorani) July 28, 2022
ಮತ್ತೊಂದು ವೀಡಿಯೊವು ನಗರದ ಪ್ರವೇಶದ್ವಾರದ ರಸ್ತೆಗಳು ಪ್ರವಾಹದಿಂದಾಗಿ ಕೆಟ್ಟದಾಗಿ ಹಾನಿಗೊಳಗಾಗಿರುವುದನ್ನು ತೋರಿಸುತ್ತದೆ. ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ಕಾರುಗಳು ಚಾಲನೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಡಾಂಬರು ಕಿತ್ತು ಬರುತ್ತಿದೆ.
ಖಲೀಜ್ ಟೈಮ್ಸ್ ಪ್ರಕಾರ, ಮಳೆಯ ಪರಿಣಾಮವಾಗಿ ಯುಎಇಯ ಪೂರ್ವ ಭಾಗಗಳಲ್ಲಿ ಹಠಾತ್ ಪ್ರವಾಹವು ಮನೆಗಳಿಗೆ ಹಾನಿಯಾಗಿದ್ದು, ವಾಹನಗಳನ್ನು ಕೊಚ್ಚಿಕೊಂಡು ಹೋಗಿದೆ. ಸಂತ್ರಸ್ತ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಸೇನಾ ವಾಹನಗಳನ್ನು ನಿಯೋಜಿಸಲಾಗಿದೆ. ಅಪಾಯಕಾರಿ ಹವಾಮಾನ ಘಟನೆಗಳ ದೃಷ್ಟಿಯಿಂದ ಎಮಿರೇಟ್ನ ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ನೀಡಿದೆ. ಮುಂದಿನ ಕೆಲವು ದಿನಗಳಲ್ಲಿ ಮೋಡ ಕವಿದ ವಾತಾವರಣವು ಮುಂದುವರಿಯುತ್ತದೆ ಎಂದು ಅದು ಹೇಳಿದೆ.
A view near Fujairah airport in the emirate after yesterday's floods.
Pray to Allah to protect everyone's life and property.#UAE #EmiratesRain #Fujairah #الامارات #السياق #امطار_الامارات #الفجيرة #الامارات_اليمن pic.twitter.com/0OikOzxmH9— Siraj Noorani (@sirajnoorani) July 28, 2022
ರಕ್ಷಣಾ ಕಾರ್ಯಕರ್ತರು ಇದುವರಗೆ ಸುಮಾರು 900 ಜನರನ್ನು ರಕ್ಷಿಸಿದ್ದಾರೆ ಎಂದು ನ್ಯಾಷನಲ್ ವರದಿಯಲ್ಲಿ ತಿಳಿಸಿದೆ. 3,897 ಜನರನ್ನು ಶಾರ್ಜಾ ಮತ್ತು ಫುಜೈರಾದಲ್ಲಿ ತಾತ್ಕಾಲಿಕ ಆಶ್ರಯದಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ.
ಹವಾಮಾನ ಬದಲಾವಣೆಯು ಎಮಿರೇಟ್ಸ್ನಲ್ಲಿ ಭಾರೀ ಮಳೆಯ ಆವರ್ತನಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (NCM) ಹೇಳಿದೆ.
ಯುಎಇ ಕ್ಯಾಬಿನೆಟ್ ಎಲ್ಲಾ ಫೆಡರಲ್ ಇಲಾಖೆಗಳಿಗೆ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದ್ದು, ಮಾನವ ಸಂಪನ್ಮೂಲ ಮತ್ತು ಎಮಿರೈಸೇಶನ್ ಸಚಿವಾಲಯ (MOHRE) ಖಾಸಗಿ ವಲಯದ ಸಂಸ್ಥೆಗಳಿಗೆ ಅದೇ ಸೂಚನೆಯನ್ನು ನೀಡಿದೆ ಎನ್ನಲಾಗುತ್ತಿದೆ.
Shocking news: ವರದಕ್ಷಿಣೆ ನೀಡದಿದ್ದಕ್ಕೆ ಸೋದರ ಸಂಬಂಧಿ ಜೊತೆ ಸೇರಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪತಿ