ಪಾಟ್ನಾ: ಬಿಹಾರದ ನವಾಡ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ʻನಿಮ್ಮ ಕೆಲಸ ಅತೃಪ್ತಿಕರʼವೆಂದು ಐವರು ಸಹೋದ್ಯೋಗಿಗಳನ್ನು ಲಾಕಪ್ಗೆ ಹಾಕಿದ್ದಾರೆ. ಇದೀಗ ಅದರ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ಸೆಪ್ಟೆಂಬರ್ 8 ರಂದು ನಡೆದಿದ್ದು, ‘ಇದು ವಿಷಾದಕರ ಬೆಳವಣಿಗೆ’ ಎಂದಿರುವ ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ಬಿಹಾರ ಪೊಲೀಸ್ ಒಕ್ಕೂಟವು ಘಟನೆಯ ಬಗ್ಗೆ ತನಿಖೆ ನಡೆಯಬೇಕು. ಪೊಲೀಸ್ ಅಧೀಕ್ಷಕಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ತನಿಖೆಗೆ ಒತ್ತಾಯಿಸಿದೆ.
ಐವರು ಸಹೋದ್ಯೋಗಿಗಳು ಲಾಕಪ್ ಒಳಗೆ ಇರುವುದನ್ನು ಭದ್ರತಾ ಕ್ಯಾಮರಾ ದೃಶ್ಯಾವಳಿಗಳು ತೋರಿಸಿವೆ. ಇಲ್ಲಿ ಸಬ್-ಇನ್ಸ್ಪೆಕ್ಟರ್ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮರೇಖಾ ಸಿಂಗ್, ASI ಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ ಉರಾನ್ ಲಾಕಪ್ ಒಳಗೆ ಇರುವುದನ್ನು ನೋಡಬಹುದು. ಮಧ್ಯರಾತ್ರಿಯ ಸುಮಾರಿಗೆ ಅವರನ್ನು ಹೊರಗೆ ಬಿಡಲಾಯಿತು.
Nawada SP Accused Of Detaining 5 Policemen, BPA Demanded Investigation
Read more:https://t.co/K3LIGpUCa5#BiharPolice @bihar_police pic.twitter.com/65MGPNcE3k— The National Bulletin (@TheNationalBul1) September 10, 2022
ಮೂಲಗಳ ಪ್ರಕಾರ, ಎಸ್ಪಿ ಗೌರವ್ ಮಂಗ್ಲಾ ಪ್ರಕರಣಗಳನ್ನು ಪರಿಶೀಲಿಸಲು ಸೆಪ್ಟೆಂಬರ್ 8 ರಂದು ರಾತ್ರಿ 9 ಗಂಟೆಗೆ ಪೊಲೀಸ್ ಠಾಣೆಗೆ ಬಂದಿದ್ದರು. ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಸಿಟ್ಟಿಗೆದ್ದ ಮಂಗ್ಲಾ ಈ ಐವರನ್ನು ಲಾಕಪ್ಗೆ ಹಾಕಿದ್ದಾರೆ.
‘ಇಲ್ಲಿ ಎನೂ ನಡೆದಿಲ್ಲ. ನಡೆಯಬಾರದ್ದು ನಡೆದಿದೆ ಎನ್ನುವ ರೀತಿಯಲ್ಲಿ ಮಾಧ್ಯಮಗಳು ವರದಿ ಮಾಡುತ್ತಿವೆ’ ಎಂದು ಎಸ್ಪಿ ಮಂಗ್ಲಾ ಹೇಳಿದ್ದಾರೆ. ಸ್ಟೇಷನ್ ಜವಾಬ್ದಾರಿ ಹೊತ್ತಿರುವ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಸಹ ಎಸ್ಪಿ ಹೇಳಿಕೆಯನ್ನು ಪುಷ್ಟೀಕರಿಸಿದ್ದಾರೆ.
BIGG NEWS : ನಾಳೆಯಿಂದ ವಿಧಾನಮಂಡಲ ಅಧಿವೇಶನ : ಆಡಳಿತ ಪಕ್ಷದ ವಿರುದ್ಧ ಮುಗಿ ಬೀಳಲು ವಿಪಕ್ಷಗಳು ಸಿದ್ದ
BIG NEWS : ಇಂದು ಭೂಮಿಯತ್ತ ಧಾವಿಸುತ್ತಿದೆ ಬೃಹತ್ ʻಕ್ಷುದ್ರಗ್ರಹʼ… ಈ ಬಗ್ಗೆ ನಾಸಾ ಹೇಳಿದ್ದೇನು?
BIGG NEWS : ರೈತರೇ ಗಮನಿಸಿ : ಪಿಎಂ ಕಿಸಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸಿಕೊಳ್ಳಲು ಸೆಪ್ಟೆಂಬರ್ 14 ಕೊನೆಯ ದಿನ