ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ತಳ್ಳಿಕೊಂಡು ಹೋಗುತ್ತಿರುವ ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುಬಂದಿವೆ. ಈ ದೃಶ್ಯವನ್ನು ಅಲ್ಲಿನ ಜನರು ವಿಡಿಯೋ ಮಾಡಿದ್ದು, ವ್ಯಕ್ತಿಯ ಮೇಲೆ ಆಕ್ರೋಶಗೊಂಡಿರುವ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಎಸೆದ ವಸ್ತುಗಳ ಕಸದ ರಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುಬಂದಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಉದ್ಯೋಗಿ ಕೆಲಸ ಕಳೆದುಕೊಂಡಿದ್ದಾರೆ.
ವಿಡಿಯೋದಲ್ಲಿ, ವ್ಯಕ್ತಿ ಕಸದ ಬಂಡಿ ತಳ್ಳಿಕೊಂಡು ಹೋಗುತ್ತಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುರುತ್ತವೆ. ಇದನ್ನು ಕಂಡ ಅಲ್ಲಿನ ಸ್ಥಳೀಯರು ಅವನನ್ನೇ ಹಿಂಬಾಲಿಸಿ ʻಹೀಗೆ ಮಾಡುತ್ತಿರುವುದು ಸರಿನಾ?ʼ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಕ್ತಿ “ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಸದ ಬುಟ್ಟಿಯಲ್ಲಿತ್ತು, ಆದ್ದರಿಂದ ನಾನು ಅವುಗಳನ್ನು ನನ್ನ ಗಾಡಿಯಲ್ಲಿ ಹಾಕಿದ್ದೇನೆ” ಎನ್ನುವುದನ್ನು ಇಲ್ಲಿ ಕೇಳಬಹುದು.
A contractual worker at UP’s Mathura Nagar Nigam was terminated after he was found carrying pictures of PM Narendra Modi and CM Yogi Adityanath among other dignitaries in his hand held garbage cart. pic.twitter.com/Jg2x3LW3Mk
— Piyush Rai (@Benarasiyaa) July 17, 2022
ರಾಜಸ್ಥಾನದ ಅಲ್ವಾರ್ನ ಕೆಲವು ವ್ಯಕ್ತಿಗಳು ಕೈಯಲ್ಲಿ ಹಿಡಿದಿರುವ ಬಂಡಿಯೊಂದಿಗೆ ವ್ಯಕ್ತಿಯನ್ನು ಗುರುತಿಸಿ, ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಂತರ ಅವರು ಫೋಟೋಗಳನ್ನು ತೊಳೆಯುತ್ತಿರುವುದು ಕಂಡುಬಂದಿದೆ. “ನಾವು ಈ ಫೋಟೋಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಮೋದಿ ಜಿ ಮತ್ತು ಯೋಗಿ ಜಿ ಈ ದೇಶದ ಆತ್ಮ” ಎಂದು ಅವರು ಹೇಳಿದರು.
ಟ್ವಿಟರ್ನಲ್ಲಿ ಈ ವಿಡಿಯೋವನ್ನು ನೋಡಿದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡಪಿ: ಮಣಿಪಾಲದಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು