ರಾಯ್ಪುರ(ಛತ್ತೀಸ್ಗಢ): ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರಿಗೆ ಚಾಟಿಯೇಟು ಬಿದ್ದಿದೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು, ಭೂಪೇಶ್ ಬಘೇಲ್ ಅವರು ದುರ್ಗ್ ಜಿಲ್ಲೆಯ ಜಜಂಗಿರಿ ಮತ್ತು ಕುಮ್ಹಾರಿ ಎಂಬ ಎರಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಜಾನಪದ ಸಂಪ್ರದಾಯದ ಭಾಗವಾಗಿ ತನ್ನ ಮಣಿಕಟ್ಟಿನ ಮೇಲೆ ಚಾಟಿಯೇಟನ್ನು ಹಾಕಿಸಿಕೊಂಡಿದ್ದಾರೆ. ಗೌರ ಗೌರಿ ಪೂಜೆಯ ಸಮಯದಲ್ಲಿ “ಸೊಂಟ ಪ್ರಹಾರ್” ಅಥವಾ ಚಾವಟಿಯಿಂದ ತಿಂದ ಏಟಿನ ಊದುವಿಕೆಯು ಅದೃಷ್ಟವನ್ನು ತರುತ್ತದೆ ಮತ್ತು ಕೆಟ್ಟದ್ದನ್ನು ತಪ್ಪಿಸುತ್ತದೆ ಎಂದು ನಂಬಲಾಗಿದೆ. ಈ ಬಗ್ಗೆ ಅವರ ಕಚೇರಿ ಹೊರಡಿಸಿದ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
सोंटे का प्रहार और परंपराओं का निर्वहन. pic.twitter.com/SV82qommmu
— Bhupesh Baghel (@bhupeshbaghel) October 25, 2022
ಅದರ ವೀಡಿಯೋವನ್ನು ಟ್ವೀಟ್ ಮಾಡಿರುವ ಬಘೇಲ್ ಅವರು, ‘ಸಂಪ್ರದಾಯ ಪಾಲಿಸಿ’ ಎಂದು ಹೇಳಿದ್ದಾರೆ. ರಾಜ್ಯದ ಅಭ್ಯುದಯಕ್ಕಾಗಿ ಮುಖ್ಯಮಂತ್ರಿಗಳು ಪ್ರತಿ ವರ್ಷ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Viral News : ತೆಲಂಗಾಣ ಆಸ್ಪತ್ರೆಯಲ್ಲಿ ರೋಗಿಯ ಹಾಸಿಗೆಯ ಕೆಳಗೆ ಹಾವು ಪ್ರತ್ಯಕ್ಷ , ಶಾಕಿಂಗ್ Video | Watch