ಆಂಧ್ರಪ್ರದೇಶ: ಟೋಲ್ ಶುಲ್ಕದ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಎಸ್ವಿ ಪುರಂ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ಘಟನೆಯ ದೃಶ್ಯಾವಳಿಗೆಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಫಾಸ್ಟ್ಟ್ಯಾಗ್ ಪಾವತಿ ಕೆಲಸ ಮಾಡದ ಕಾರಣ, ಟೋಲ್ ಪ್ಲಾಜಾ ಸಿಬ್ಬಂದಿ ಟೋಲ್ ಪಾವತಿಸಲು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು ಮತ್ತು ಅವರ ಹಿಂದೆ ಸರತಿಯಲ್ಲಿ ನಿಂತಿರುವ ಇತರ ವಾಹನಗಳಿಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡರು.
#JUSTIN: Around 70 students of #TamilNadu studying in private college in #Puthuru damaged vehicles near SV Puram Toll Plaza. The fight began after the vehicle they were travelling had no balance in fastag, and was told to wait beside the road. @NewsMeter_In @CoreenaSuares2 pic.twitter.com/GeegR8IFKy
— SriLakshmi Muttevi (@SriLakshmi_10) October 23, 2022
ಈ ವೇಳೆ ಕೊಂಪಗೊಂಡ ವಿದ್ಯಾರ್ಥಿಯೊಬ್ಬ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾನೆ. ನಂತ್ರ ವಿದ್ಯಾರ್ಥಿಗಳು ಸಿಬ್ಬಂದಿ ಮೇಲೆ ಹೆಲ್ಮೆಟ್ನಿಂದ ಹಲ್ಲೆ ನಡೆಸಿದ್ದು, ಅಲ್ಲಿದ್ದ ಕೆಲವು ವಾಹನಗಳಿಗೆ ಹಾನಿ ಮಾಡಿದ್ದಾರೆ. ಈ ವೇಳೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ಎದುರಿಸಿ, ಟೋಲ್ ಪ್ಲಾಜಾದಲ್ಲಿ ವಾಹನಗಳ ಕ್ಷಣಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ನೀಡಿದರೂ ಘರ್ಷಣೆ ಸ್ವಲ್ಪ ಕಾಲ ಮುಂದುವರೆಯಿತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಇತರ ವಾಹನಗಳಿಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳನ್ನು ಕೋರಿದರು. ಆದರೆ ವಿದ್ಯಾರ್ಥಿಗಳು ಪಟ್ಟುಬಿಡದೆ ತಮಿಳುನಾಡು ನೋಂದಣಿ ಹೊಂದಿರುವ ವಾಹನಗಳಿಗೆ ಮಾತ್ರ ದಾರಿ ಮಾಡಿಕೊಟ್ಟು ಆಂಧ್ರಪ್ರದೇಶದ ವಾಹನಗಳನ್ನು ಹಾದು ಹೋಗದಂತೆ ತಡೆದಿದ್ದಾರೆ ಎನ್ನಲಾಗಿದೆ. ಇದು ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಗುಂಪಿನ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು.
ಘಟನೆಯ ಸಂಪೂರ್ಣ ತನಿಖೆಯನ್ನು ಪೊಲೀಸರು ಆರಂಭಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
BIGG NEWS : 2013ರಲ್ಲಿ ಸಿಎಂ ಆಗುವ ಹಣೆಬರಹ ನನಗೆ ಇರಲಿಲ್ಲ ಅನಿಸುತ್ತೆ : ಬೇಸರ ವ್ಯಕ್ತಪಡಿಸಿದ ಡಾ ಜಿ ಪರಮೇಶ್ವರ್
BIGG NEWS : ದೀಪಾವಳಿಗೆ ಪಟಾಕಿ ಸಿಡಿಸಲು ಸಮಯ ನಿಗದಿ : ರಾತ್ರಿ 8 ರಿಂದ 10 ರವರೆಗೆ ಅವಕಾಶ