ಕಾಬೂಲ್: ತಾಲಿಬಾನ್ ಸದಸ್ಯನೊಬ್ಬ ಅಮೆರಿಕ ಸೇನೆಯ ಹೆಲಿಕಾಪ್ಟರ್ ಹಾರಿಸಲು ಯತ್ನಿಸಿ ಮೂವರನ್ನು ಬಲಿತೆಗೆದುಕೊಂಡ ಘಟನೆ ಸೆಪ್ಟೆಂಬರ್ 10 ರಿಂದ ಸದ್ದು ಮಾಡುತ್ತಿದೆ. ಆದರೆ, ಆ ದೃಶ್ಯಾವಳಿ ಇದೀಗ ಬಿಡುಗಡೆಯಾಗಿದೆ.
ಅನನುಭವಿ ತಾಲಿಬಾನ್ ಪೈಲಟ್ $ 30 ಮಿಲಿಯನ್ ಅಮೆರಿಕನ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅನ್ನು ಹಾರಿಸಲು ಯತ್ನಿಸಿದ್ದು ಅದು ಪತನಗೊಳ್ಳುವ ವೀಡಿಯೊ ವೈರಲ್ ಆಗಿದೆ. ಈ ದೃಶ್ಯವನ್ನು ಮತ್ತೊಬ್ಬ ತಾಲಿಬಾನ್ ಸದಸ್ಯ ಸೆರೆಹಿಡಿದಿದ್ದಾನೆ.
36-ಸೆಕೆಂಡಿನ ತುಣುಕಿನಲ್ಲಿ, ಚಾಪರ್ ಆಗಸದಲ್ಲಿ ಹಾರಾಟ ನಡೆಸಿದ ನಂತರ ನೆಲಕ್ಕೆ ಅಪ್ಪಳಿಸುವುದನ್ನು ನೋಡಬಹುದು.
ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಕಾಬೂಲ್ನ ಮಿಲಿಟರಿ ತರಬೇತಿ ನೆಲೆಯೊಳಗೆ ಪತನಗೊಂಡಿದೆ ಎಂದು ವರದಿಯಾಗಿದೆ. ಇದು ನಾಲ್ಕು-ಬ್ಲೇಡ್, ಅವಳಿ-ಎಂಜಿನ್, ಮಧ್ಯಮ-ಲಿಫ್ಟ್ ಯುಟಿಲಿಟಿ ಮಿಲಿಟರಿ ಹೆಲಿಕಾಪ್ಟರ್ ಆಗಿತ್ತು.
BREAKING NEWS : ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ