ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಯೊಳಗೆ ತಮ್ಮ ಸಹಪಾಠಿಯನ್ನು ಮನಬಂದಂತೆ ಥಳಿಸಿದ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, ಹಾಸ್ಟೆಲ್ ಕೊಠಡಿಯೊಂದರೊಳಗೆ ಮೂವರು ವಿದ್ತಾರ್ಥಿಗಳು ತಮ್ಮ ಸಹಪಾಠಿಯನ್ನು ಮೊದಲು ಕೋಲಿನಿಂದ ಮನಬಂದಂತೆ ಹೊಡೆದಿದ್ದಾರೆ. ಈ ನಡುವೆ ಅಂತ್ರಸ್ತ ಅವರನ್ನು ಕ್ಷಮೆ ಕೇಳುವುದನ್ನು ನೋಡಬಹುದು. ಆದ್ರೆ, ಅವರು ಯಾವುದಕ್ಕೂ ಜಗ್ಗದೇ, ಹೊಡೆಯುವುದನ್ನು ಮುಂದುವರೆಸಿದ್ದಾರೆ. ಇನ್ನೂ, ಕಾದ ಐರನ್ ಬಾಕ್ಸ್ನಿಂದಲೂ ಸಂತ್ರಸ್ತನ ಕೈಕಾಲು ಸುಟ್ಟಿದ್ದಾರೆ ಎನ್ನಲಾಗಿದೆ.
Four engineering students studying in #SRKR #Engineering College #Bhimavaram #WestGodavari #AP have been arrested for assaulting fellow student inside hostel room with sticks, PVC pipes & branding him on chest with hot iron box even as he is pleading to be spared #AndhraPradesh pic.twitter.com/QeMubMkt7i
— rejected guy (@Brother31952713) November 5, 2022
ಸಂತ್ರಸ್ತ ಮತ್ತು ಎಲ್ಲಾ ಆರೋಪಿಗಳು ಎಸ್ಆರ್ಕೆಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಘಟನೆ ಒಂದೆರಡು ದಿನಗಳ ಹಿಂದೆ ನಡೆದಿದೆ ಎಂದು ವರದಿಯಾಗಿದೆ.
ಸಂತ್ರಸ್ತ ವಿದ್ಯಾರ್ಥಿ ಅಂಕಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದ ಅನೇಕ ಭಾಗಗಳಲ್ಲಿ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
BIG NEWS : ಇಂದು 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ | Bypolls results 2022
BIGG NEWS : ಬೆಂಗಳೂರಿಗರೇ ಗಮನಿಸಿ : ಇಂದು ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ|Power Cut
ತೆಲಂಗಾಣದಲ್ಲಿ ಘೋರ ದುರಂತ: ನದಿಯಲ್ಲಿ ಈಜಲು ಹೋಗಿ ಐವರು ಮಕ್ಕಳು ಸೇರಿ ಶಿಕ್ಷಕ ಸಾವು
BIG NEWS : ಇಂದು 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ | Bypolls results 2022