ಜೈಪುರ: ರಾಜಸ್ಥಾನದ ‘ಸ್ನೇಕ್ ಮ್ಯಾನ್’ ಎಂದೇ ಕರೆಯಲ್ಪಡುವ 45 ವರ್ಷದ ವಿನೋದ್ ತಿವಾರಿ ಎಂಬುವರು ನಾಗರಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿನೋದ್ ತಿವಾರಿ ಸುಮಾರು 20 ವರ್ಷಗಳಿಂದ ಹಾವು ಹಿಡಿಯುತ್ತಿದ್ದರು. ಹಾವುಗಳನ್ನು ಹಿಡಿದ ನಂತರ ಕಾಡಿಗೆ ಬಿಡುತ್ತಿದ್ದರು. ಶನಿವಾರ ವಿಷಪೂರಿತ ನಾಗರಹಾವು ಕಚ್ಚಿ ತಿವಾರಿ ಮೃತಪಟ್ಟಿದ್ದಾರೆ.
#Rajasthan | चुरु में सांप को पकड़ने आए विनोद तिवाड़ी को कोबरा ने काटा, कुछ ही मिनटों में हुई मौत, घटना हुई CCTV में कैद.#Snakeman #CobraBite #SnakeBite #ChuruDistrict #CCTVFootage #SardarShaharTown #Trending #abcnewsmedia #राजस्थान pic.twitter.com/HDjtJDsZMD
— Abcnews.media (@abcnewsmedia) September 13, 2022
ಈ ಘಟನೆಯ ದೃಶ್ಯಾವಳಿ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶನಿವಾರ ಬೆಳಿಗ್ಗೆ ಚುರುವಿನ ಗೊಗಮೆಡಿ ಪ್ರದೇಶದಲ್ಲಿನ ಅಂಗಡಿಯೊಂದರ ಹೊರಗೆ ತಿವಾರಿ ನಾಗರ ಹಾವನ್ನು ಹಿಡಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಚೀಲದಲ್ಲಿ ಹಾಕಲು ಪ್ರಯತ್ನಿಸಿದಾಗ ಹಾವು ಅವನ ಬೆರಳನ್ನು ಕಚ್ಚಿದೆ. ವಿಷಪೂರಿತ ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆತ ಸಾವನ್ನಪ್ಪಿದ್ದಾನೆ.
ವಿನೋದ್ ತಿವಾರಿ ಅವರು ಆ ಪ್ರದೇಶದಲ್ಲಿ ‘ಸ್ನೇಕ್ ಮ್ಯಾನ್’ ಎಂದೇ ಜನಪ್ರಿಯ.
BIGG NEWS: ಮತ್ತೊಂದು ಕೋವಿಡ್ ರೂಪಾಂತರ ಈಗ ಹರಡುತ್ತಿದೆ; ಈ ಬಗ್ಗೆ ನಿರ್ಲಕ್ಷ್ಯಿಸದಿರಿ : ಇಲ್ಲಿದೆ ಮಾಹಿತಿ
BIGG NEWS : ʻಒತ್ತುವರಿ ತೆರವು ಕಾರ್ಯದಲ್ಲಿ ಬೇಧಭಾವ ಮಾಡಿಲ್ಲʼ : BBMP ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ
BREAKING NEWS: ಗೋವಾದ 8 ʻಕಾಂಗ್ರೆಸ್ʼ ಶಾಸಕರು ʻಬಿಜೆಪಿʼ ಸೇರಲಿದ್ದಾರೆ: ಮೂಲಗಳು