ನವದೆಹಲಿ: ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕ ಕೊಟ್ಟ 500 ರೂ. ಮುಖಬೆಲೆಯ ನೋಟನ್ನು ಬದಲಿಸಿ 20 ರೂ. ಕೊಟ್ಟಿರುವೆ ಎಂದು ವಂಚಿಸಿರುವ ಆಗಾತಕಾರಿ ಘಟನೆಯೊಂದು ನಡೆದಿದ್ದು, ನೋಟು ಬದಲಿಸುವ ವಿಡಿಯೋ ಇದೀಗ ಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ನಗದು ವಹಿವಾಟಿನ ವೇಳೆ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುಕ್ರವಾರ ರೈಲ್ ವಿಸ್ಪರ್ಸ್ ಎಂಬ ಬಳಕೆದಾರರು ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಂತೆ ಮಂಗಳವಾರ ಈ ಘಟನೆ ನಡೆದಿದೆ.

ವಿಡಿಯೋದಲ್ಲಿ ಟಿಕೆಟಿಂಗ್ ಕೌಂಟರ್ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಹಣ ವಂಚನೆ ಮಾಡುತ್ತಿದ್ದಾನೆ. ಸ್ವೀಕರಿಸಿದ 500 ರೂ. ನೋಟನ್ನು ಬದಲಿಸಿ ನೀನು 20 ರೂ. ಕೊಟ್ಟೀದ್ದೀಯ ಎಂದು ಹೇಳಿ, ಟಿಕೆಟ್ ದರ 125 ರೂ. ಆಗಿದೆ. 125 ರೂ. ನೀಡು ಎಂದು ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡುವ ಮೂಲಕ ಪ್ರಯಾಣಿಕರನ್ನು ಮರುಳು ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ವಿಡಿಯೋದಲ್ಲಿ, ಪ್ರಯಾಣಿಕ ಸೂಪರ್‌ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್‌ಗಾಗಿ 500 ರೂ. ನೋಟು ನೀಡಿದ್ದಾನೆ. ಹಣ ಪಡೆದ ಉದ್ಯೋಗಿ ಕೂಡಲೇ 20 ರೂ. ಮುಖಬೆಲೆಯ ನೋಟನ್ನು ವಿನಿಮಯ ಮಾಡಿಕೊಳ್ಳುತ್ತಾನೆ. ನಂತ್ರ, ಟಿಕೆಟ್ ದರ 125 ರೂ. ಆಗಿದೆ. ನೀನು 20 ರೂ. ಕೊಟ್ಟಿದ್ದೀಯ. ಬಾಕಿ ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದಾನೆ.

ವಿಡಿಯೋ ಶೇರ್ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ರೈಲ್ವೆ ಸೇವಾ ಮತ್ತು ದೆಹಲಿ ವಿಭಾಗ, ಉತ್ತರ ರೈಲ್ವೇ (DRM ದೆಹಲಿ NR) ಗಮನಕ್ಕೆ ಬಂದಿದೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಂಬಂಧಿತ ರೈಲ್ವೆ ಅಧಿಕಾರಿಗಳು, “ನೌಕರನ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ” ಎಂದು ಹೇಳಿದರು.

BIGG NEWS : ದತ್ತಪೀಠಕ್ಕೆ 2-3 ದಿನಗಳಲ್ಲಿ ಅರ್ಚಕರ ನೇಮಕ : ಶಾಸಕ ಸಿ.ಟಿ. ರವಿ ಹೇಳಿಕೆ

ಸೂರ್ಯ ಮುದ್ರೆ ಮಾಡುವುದರಿಂದಾಗುವ ಲಾಭಗಳೇನು? ಇದನ್ನು ಮಾಡುವ ಸರಿಯಾದ ವಿಧಾನ ತಿಳಿಯಿರಿ | surya mudra

BIG AERT: ನಿಮ್ಮ ಮೊಬೈಲ್‌ನಲ್ಲಿ ಈ 4 ಆಪ್‌ಗಳಿದ್ರೆ ಕೂಡಲೇ ಡಿಲೀಟ್‌ ಮಾಡಿ, ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ

BIGG NEWS : ದತ್ತಪೀಠಕ್ಕೆ 2-3 ದಿನಗಳಲ್ಲಿ ಅರ್ಚಕರ ನೇಮಕ : ಶಾಸಕ ಸಿ.ಟಿ. ರವಿ ಹೇಳಿಕೆ

Share.
Exit mobile version