ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ನಡೆದು ಮೂರು ದಿನಗಳು ಕಳೆದಿವೆ. ನಂಜನಗೂಡಿನ ಪ್ರಸಿದ್ಧ ಪ್ರಾಚೀನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ರಾಹುಲ್ ಗಾಂಧಿ ಭಾನುವಾರ ಭೇಟಿ ನೀಡಿದರು. ಬಳಿಕ ಅವರು ಸಂಜೆ ಮೈಸೂರಿನ ಎಪಿಎಂಸಿ ಮೈದಾನದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಸಮಯದಲ್ಲಿ ಮಧ್ಯದಲ್ಲಿ ಭಾರಿ ಮಳೆ ಸುರಿಯಲು ಪ್ರಾರಂಭಿಸಿತು. ಆದಾಗ್ಯೂ, ಮಳೆ ನಡುವೆ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮುಂದುವರಿಸಿದರು. ಈ ವೇಳೇಯಲ್ಲಿ ಅವರು ಅವರು ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ತೀವ್ರವಾಗಿ ಗುರಿಯಾಗಿಸಿಕೊಂಡು ಮಾತನಾಡಿದರು.
ವೀಡಿಯೊದಲ್ಲಿ, ರಾಹುಲ್ ಗಾಂಧಿ ಮಳೆಯ ನಡುವೆ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದನ್ನು ಕಾಣಬಹುದು. ಅದರಲ್ಲಿ ಅವರು ಭಾರತ್ ಜೋಡೋ ಯಾತ್ರೆಯು ಕರ್ನಾಟಕವನ್ನು ತಲುಪಿದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನದಿಯಂತಹ ಪ್ರಯಾಣ ಸಾಗಲಿದೆ. ಈ ನದಿಯಲ್ಲಿ ಹಿಂಸೆ, ದ್ವೇಷವನ್ನು ನೀವು ನೋಡುವುದಿಲ್ಲ. ಪ್ರೀತಿ ಮತ್ತು ಭ್ರಾತೃತ್ವವನ್ನು ಮಾತ್ರ ಕಾಣಬಹುದು. ಈ ಪ್ರಯಾಣ ನಿಲ್ಲುವುದಿಲ್ಲ. ಈಗ ನೋಡಿ, ಮಳೆಯಾಗುತ್ತಿದೆ, ಮಳೆ ಖುಢ ಪ್ರಯಾಣವನ್ನು ನಿಲ್ಲಿಸಿಲ್ಲ. ಚಂಡಮಾರುತವು ಈ ಪ್ರಯಾಣವನ್ನು ನಿಲ್ಲಿಸುವುದಿಲ್ಲ. ದೇಶದಲ್ಲಿ ದ್ವೇಷವನ್ನು ಹರಡುತ್ತಿರುವ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ನಿಲ್ಲುವುದು ಈ ಯಾತ್ರೆಯ ಉದ್ದೇಶವಾಗಿದೆ ಅಂತ ಹೇಳಿದರು.
ಇದೇ ವೇಳೆ ಅವರು, “ಭಾರತವನ್ನು ಒಗ್ಗೂಡಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಭಾರತದ ದನಿ ಎತ್ತುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದರು.
भारत को एकजुट करने से,
हमें कोई नहीं रोक सकता।भारत की आवाज़ उठाने से,
हमें कोई नहीं रोक सकता।कन्याकुमारी से कश्मीर तक जाएगी, भारत जोड़ो यात्रा को कोई नहीं रोक सकता। pic.twitter.com/sj80bLsHbF
— Rahul Gandhi (@RahulGandhi) October 2, 2022