ಶಿವಮೊಗ್ಗ: ನಾಗರ ಹಾವಿಗೆ ಮುತ್ತಿಕ್ಕಲು ಹೋಗಿ ಉರಗ ತಜ್ಞರೊಬ್ಬರು ಕಚ್ಚಿಸಿಕೊಂಡ ಘಟನೆ ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿಯಲ್ಲಿ. ಅಲೆಕ್ಸ್ ಎನ್ನುವ ಉರಗ ತಜ್ಞ ಹೀಗೆ ಯಡವಟ್ಟು ಮಾಡಿಕೊಟ್ಟಿದ್ದು, ಬುಧವಾರ ಹಾವು ಹಿಡಿದ ಖುಶಿಯಲ್ಲಿ ಅಲೆಕ್ಸ್ ಹಾವಿಗೆ ಮುತ್ತುಕೊಡಲು ಮುಂದಾಗಿದ್ದಾನೆ. ಈ ವೇಳೆಯಲ್ಲಿ ಹಾವು ಆತನಿಗೆ ಕಚ್ಚಿದೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯ ಅಲೆಕ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಹಾವಿನಿಂದ ಕಚ್ಚಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಉರಗ ತಜ್ಞ ಅಲೆಕ್ಸ್ ಈ ವರ್ತನೆಗೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಜೀವಕ್ಕೆ ಹಾನಿಯಾಗಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು, ಅವರ ಕುಟುಂಬದ ಸದ್ಯಸರ ಪಾಡೇನು ಅಂಥ ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚಿಗೆ ಕೆಲವು ಮಂದಿ ಹೀಗೆ ಹಾವುಗಳಿಗೆ ಮುತ್ತುಕೊಡುವ ಪರಿಸ್ಥಿತಿ ಕೂಡ ಹೆಚ್ಚಾಗುತ್ತಿದ್ದು, ತಮ್ಮ ಪ್ರಾಣಕ್ಕೆ ಆಪಾಯವನ್ನು ತಂದುಕೊಳ್ಳುತ್ತಿದ್ದಾರೆ.