ಪಾಕಿಸ್ತಾನ: ಪಾಕಿಸ್ತಾನದಲ್ಲಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಅಡುಗೆ ಅನಿಲವನ್ನು ಸಂಗ್ರಹಿಸಲು ಜನರು ಹತಾಶ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ, ಸ್ಥಳೀಯರು ಅಡುಗೆ ಅನಿಲ(LPG)ವನ್ನು ಸಂಗ್ರಹಿಸಲು ಬೃಹತ್ ಪ್ಲಾಸ್ಟಿಕ್ ಬಲೂನ್ಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
DW.com ಪ್ರಕಾರ, ಈ ಪ್ಲಾಸ್ಟಿಕ್ ಬಲೂನ್ಗಳನ್ನು ದೇಶದ ಅನಿಲ ಪೈಪ್ಲೈನ್ ಜಾಲಕ್ಕೆ ಸಂಪರ್ಕ ಹೊಂದಿದ ಅಂಗಡಿಗಳಲ್ಲಿ ನೈಸರ್ಗಿಕ ಅನಿಲದಿಂದ ತುಂಬಿಸಲಾಗುತ್ತದೆ. ಈ ಅನಿಲ ಸೋರಿಕೆಯನ್ನು ತಪ್ಪಿಸಲು, ಮಾರಾಟಗಾರರು ನಳಿಕೆ ಮತ್ತು ಕವಾಟವನ್ನು ಬಹಳ ಜಾಗರೂಕರಾಗಿ ಬಳಸುತ್ತಾರೆ. ನಂತರ ಬಲೂನ್ಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ. ನಮತ್ರ, ಜನರು ಸಣ್ಣ ವಿದ್ಯುತ್ ಹೀರಿಕೊಳ್ಳುವ ಪಂಪ್ನ ಸಹಾಯದಿಂದ ಅನಿಲವನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಮೂರರಿಂದ ನಾಲ್ಕು ಕೆಜಿ ಗ್ಯಾಸ್ ತುಂಬಲು ಅಂದಾಜು ಒಂದು ಗಂಟೆ ಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಟ್ವಿಟ್ಟರ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ʻಪಾಕಿಸ್ತಾನದಲ್ಲಿ ಅಡುಗೆಗೆ ಸಿಲಿಂಡರ್ಗಳ ಬದಲಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ಗ್ಯಾಸ್ ಬಳಸುವ ಅಭ್ಯಾಸ ಹೆಚ್ಚಾಗಿದೆ. ಗ್ಯಾಸ್ ಪೈಪ್ಲೈನ್ ನೆಟ್ವರ್ಕ್ಗೆ ಸಂಪರ್ಕ ಹೊಂದಿದ ಅಂಗಡಿಗಳಲ್ಲಿ ಬಲೂನ್ನಲ್ಲಿ ಅನಿಲವನ್ನು ತುಂಬಿಸಿ ಮಾರಾಟ ಮಾಡಲಾಗುತ್ತದೆ. ಜನರು ಇದನ್ನು ಅಡುಗೆಮನೆಯಲ್ಲಿ ಸಣ್ಣ ವಿದ್ಯುತ್ ಹೀರಿಕೊಳ್ಳುವ ಪಂಪ್ ಸಹಾಯದಿಂದ ಬಳಸುತ್ತಾರೆʼ ಎಂದು ಬರೆದುಕೊಂಡಿದ್ದಾರೆ.
In Pakistan, the practice of using gas packed in plastic bags instead of cylinders for cooking has increased. Gas is sold by filling bags inside the shops connected to the gas pipeline network. People use it in the kitchen with the help of a small electric suction pump.#pkmb pic.twitter.com/e1DpNp20Ku
— R Singh…🤸🤸 (@lonewolf_singh) December 31, 2022
ವಿಡಿಯೋದಲ್ಲಿ, ಇಬ್ಬರು ಮಕ್ಕಳು ಎಲ್ಪಿಜಿ ತುಂಬಿದ ಎರಡು ದೈತ್ಯ ಬಿಳಿ ಪ್ಲಾಸ್ಟಿಕ್ ಚೀಲಗಳನ್ನು ಹೊತ್ತೊಯ್ಯುತ್ತಿರುವುದನ್ನು ನೋಡಬಹುದು.
ಕೋವಿಡ್ನಿಂದ ಪತ್ನಿ ಸಾವು: ಮನೆಯಲ್ಲೇ ಅರ್ಧಾಂಗಿಯ ಸಿಲಿಕೋನ್ ಪ್ರತಿಮೆ ಸ್ಥಾಪಿಸಿದ ಪತಿ!
ಕೋವಿಡ್ನಿಂದ ಪತ್ನಿ ಸಾವು: ಮನೆಯಲ್ಲೇ ಅರ್ಧಾಂಗಿಯ ಸಿಲಿಕೋನ್ ಪ್ರತಿಮೆ ಸ್ಥಾಪಿಸಿದ ಪತಿ!