ಟೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಇರಾನ್ ಮಹಿಳೆಯೊಬ್ಬರು ಈ ಸುದ್ದಿಯನ್ನು ಕೇಳಿ ಅತೀವ ಸಂಭ್ರಮದಿಂದ ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ.
‘ಇರಾನ್ ಈಗ ಸ್ವತಂತ್ರ!’: ಮಹಿಳೆಯ ಭಾವುಕ ಕ್ಷಣ
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಅತೀವ ಭಾವುಕರಾಗಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು. ಕಣ್ಣೀರು ಸುರಿಸುತ್ತಲೇ ಅವರು, “ಥ್ಯಾಂಕ್ ಯೂ ಅಮೆರಿಕಾ, ಥ್ಯಾಂಕ್ ಯೂ ಇಸ್ರೇಲ್.. ಇರಾನ್ ಈಗ ಸ್ವತಂತ್ರ!” ಎಂದು ಘೋಷಣೆ ಕೂಗಿದ್ದಾರೆ. ದಶಕಗಳ ಕಾಲದ ಕಠಿಣ ಆಡಳಿತ ಮತ್ತು ನಿರ್ಬಂಧಗಳಿಂದ ತಮಗೆ ಮುಕ್ತಿ ಸಿಕ್ಕಿದೆ ಎಂಬ ಸಮಾಧಾನ ಹಾಗೂ ಸಂತೋಷ ಅವರ ಧ್ವನಿಯಲ್ಲಿ ಎದ್ದು ಕಾಣುತ್ತಿದೆ.
ದಾಳಿಯ ಹಿನ್ನೆಲೆ ಏನು?
ವರದಿಗಳ ಪ್ರಕಾರ, ಶನಿವಾರದಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಗುಪ್ತ ಕಾರ್ಯಾಚರಣೆಯ ಕ್ಷಿಪಣಿ ದಾಳಿಯಲ್ಲಿ ಅಲಿ ಖಮೇನಿ ಹತರಾಗಿದ್ದಾರೆ. ಅಲಿ ಖಮೇನಿ ಅವರು 1989 ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿ ಗದ್ದುಗೆ ಏರಿದ್ದರು.
Watch Video
Sharing this Video of an Iranian reacting to reports Khamenei is dead.
The Joy. The Tears. Indescribable.
Few understand what this means to millions of Iranians. My entire family fled Iran in 1979 because of this regime.
Thank You America.
Thank You Israel.
FREE IRAN.
🇮🇷🇺🇸🇮🇱 pic.twitter.com/ruZQMMpq3E— JeremyUnplugged (@JeremyUnplugged) March 1, 2026








