ದೆಹಲಿ: ಗಾಜಿಯಾಬಾದ್ನಲ್ಲಿ ನಡೆದ ಹೃದಯ ವಿದ್ರಾವಕ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಮಾನವೀಯತೆ ತಲೆತಗ್ಗಿಸುವ ಈ ವೀಡಿಯೋದಲ್ಲಿ ಇಬ್ಬರು ಯುವಕರು ನಾಯಿಯನ್ನು ಸರಪಳಿಯಿಂದ ನೇಣು ಹಾಕಿ ಕೊಲ್ಲುತ್ತಿರುವುದನ್ನು ನೋಡಬಹುದು.
ಈ ವೀಡಿಯೊ ಯಾವಾಗ ಮಾಡಿದ್ದು ಎಂದು ತಿಳಿದಿಲ್ಲವಾದರೂ, ಪಡೆದ ಮಾಹಿತಿಯ ಪ್ರಕಾರ, ಈ ದೃಶ್ಯಗಳನ್ನು ಗಾಜಿಯಾಬಾದ್ನ ಲೋನಿ ಪ್ರದೇಶದ ಬಳಿಯ ಟ್ರೋನಿಕಾ ಸಿಟಿಯ ಎಲೈಚಿಪುರ್ನಲ್ಲಿ ನಡೆದದ್ದು ಎಂದು ಹೇಳಲಾಗುತ್ತಿದೆ.
ಈ ವೀಡಿಯೊದಲ್ಲಿ, ಇಬ್ಬರು ಯುವಕರು ಕಪ್ಪು ಬಣ್ಣದ ನಾಯಿಯ ಕುತ್ತಿಗೆಗೆ ಸರಪಳಿಯಿಂದ ಬಿಗಿದು ನೇತು ಹಾಕಿರುವುದನ್ನು ನೋಡಬಹುದು. ಎರಡು ಬದಿಯಲ್ಲಿ ಇಬ್ಬರು ಯುವಕರು ಆ ಸರಪಳಿಯನ್ನು ವಿವಿಧ ದಿಕ್ಕುಗಳಲ್ಲಿ ಎಳೆಯುತ್ತಿದ್ದಾರೆ. ಈ ಸಮಯದಲ್ಲಿ, ನಾಯಿ ನೋವಿನಿಂದ ನರಳಿ ಸಾಯುವುದನ್ನು ನೋಡಬಹುದು. ಈ ಘಟನೆ ಮನೆಯ ಮೇಲ್ಛಾವಣಿಯಲ್ಲಿ ನಡೆದಿರುವುದರಿಂದ ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
देखिए लोनी ग़ाज़ियाबाद में एक कुत्ते की कितनी बेरहमी से हत्या की गयी है!
जानवरों के साथ हर दिन ऐसी बर्बरता होती है..@myogiadityanath आप तो स्वयं पशु प्रेमी हैं ,आप बताइए क्या यह लोग समाज में रहने लायक़ हैं?@ghaziabadpolice @Uppolice @PetaIndia @pfaindia
pic.twitter.com/IWqfRBJPTz— Pankhuri Pathak पंखुड़ी पाठक پنکھڑی (@pankhuripathak) November 14, 2022
ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ ಭುಗಿಲೆದ್ದಿದೆ. ಗಾಜಿಯಾಬಾದ್ ಪೊಲೀಸರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ಪ್ರಕರಣದ ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಟ್ರೋನಿಕಾ ಸಿಟಿ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವೀಡಿಯೋ ನೋಡಿ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಜವಾಹರಲಾಲ್ ನೆಹರೂ ಜನ್ಮದಿನ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುಷ್ಪ ನಮನ, ಪ್ರಧಾನಿ ಮೋದಿ ಗೌರವ ಸಲ್ಲಿಕೆ
BREAKING NEWS : ಕನ್ನಡದ `ಸೂಪರ್ ಸ್ಟಾರ್’ ಸಿನಿಮಾ ನಿರ್ದೇಶಕರ ವಿರುದ್ಧ `FIR’ ದಾಖಲು
ಜವಾಹರಲಾಲ್ ನೆಹರೂ ಜನ್ಮದಿನ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುಷ್ಪ ನಮನ, ಪ್ರಧಾನಿ ಮೋದಿ ಗೌರವ ಸಲ್ಲಿಕೆ