ಕೇರಳ: ತನ್ನ ಕಾರನ್ನು ಒರಗಿ ನಿಂತಿದ್ದ ಆರು ವರ್ಷದ ಬಾಲಕನ ಎದೆಗೆ ಕಾಲಿನಿಂದ ಜಾಡಿಸಿ ಕೇರಳದ ವ್ಯಕ್ತಿಯೊಬ್ಬ ಒದ್ದಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದೀಗ ಅರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ವಿಡಿಯೋದಲ್ಲಿ, ರಸ್ತೆ ಬದಿ ನಿಂತಿದ್ದ ಕಾರನ್ನು ಬಾಲಕ ಒರಗಿ ನಿಂತಿದ್ದಾನೆ. ಇದನ್ನು ಕಂಡ ಕಾರಿನ ಮಾಲೀಕ ಬಾಲಕನ ಎದೆಗೆ ಜಾಡಿಸಿ ಒದ್ದಿದ್ದಾನೆ. ಇದ್ರಿಂದ ಬಾಲಕ ಏನೂ ಮಾತನಾಡದೇ ಸುಮ್ಮನೆ ನಿಲ್ಲುತ್ತಾನೆ. ಕೆಲವೇ ಹೊತ್ತಿನಲ್ಲಿ ಕೆಲವು ಸ್ಥಳೀಯರು ಕಾರಿನ ಸುತ್ತಲೂ ಜಮಾಯಿಸಿ ಚಾಲಕನನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ನಂತರ, ಆ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
God’s Own County has become the Devil’s Own Land under the @pinarayivijayan regime. A six-year-old Rajasthani boy was kicked and manhandled for leaning on a car. This inhuman incident happend in Thalassery, Kannur.@PrakashJavdekar @AgrawalRMD @BJP4India pic.twitter.com/R0m9nd1sFQ
— K Surendran (@surendranbjp) November 4, 2022
ಬಾಲಕನನ್ನು ರಾಜಸ್ಥಾನದ ವಲಸೆ ಕಾರ್ಮಿಕ ಕುಟುಂಬದಿಂದ ಬಂದವನಾಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊನ್ನಿಯಂಪಾಲಂ ನಿವಾಸಿ ಶಿಹಶಾದ್ ಎಂದು ಗುರುತಿಸಲಾಗಿದೆ. ರಾತ್ರಿ 8:30ರ ಸುಮಾರಿಗೆ ನಡೆದ ಘಟನೆಯ ಕುರಿತು ಪ್ರತ್ಯಕ್ಷದರ್ಶಿ ಯುವ ವಕೀಲರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಿಹಶಾದ್ ನನ್ನು ಠಾಣೆಗೆ ಕರೆಸಿದರೂ ಬಿಡುಗಡೆ ಮಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಬೆಳಗ್ಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಶೀಘ್ರವೇ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಹಾಗೂ ತಲಶ್ಶೇರಿ ಶಾಸಕ ಎಎನ್ ಶಂಸೀರ್ ಹೇಳಿದ್ದಾರೆ. ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ರಾಜ್ಯ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ, ಮಾನವೀಯತೆ ಎಂದರೆ ಅಂಗಡಿಯಿಂದ ಖರೀದಿಸುವ ವಸ್ತುವಲ್ಲ ಎಂದಿದ್ದಾರೆ.
BIGG NEWS : ನವೆಂಬರ್ 07 ರಿಂದ ಡಿಸೆಂಬರ್ 07 ರವರೆಗೆ 3ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ