ಬಿಹಾರ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಗ್ರಾಮಸ್ಥರೇ ಶಿಕ್ಷೆ ನೀಡಿರುವ ಘಟನೆ ಬಿಹಾರದ ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಜನಸಮೂಹದ ಮುಂದೆ 5 ಬಾರಿ ಸಿಟ್-ಅಪ್(ಬೈಸ್ಕೆ) ಮಾಡುವುದನ್ನು ನೋಡಬಹುದು.
ಆರೋಪಿ ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ತನ್ನ ಕೋಳಿ ಫಾರಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಆ ವ್ಯಕ್ತಿಯನ್ನು ಹಿಡಿದು ಗ್ರಾಮಸಭೆ ಅಥವಾ ಪಂಚಾಯತಿ ಮುಂದೆ ಹಾಜರುಪಡಿಸಿದಾಗ, ಹಿರಿಯರು ಆತನನ್ನು ಪೊಲೀಸರಿಗೆ ಒಪ್ಪಿಸದಿರಲು ನಿರ್ಧರಿಸಿ, ತಮ್ಮದೇ ಆದ ತೀರ್ಪು(5 ಬಾರಿ ಸಿಟ್-ಅಪ್) ನೀಡಿದ್ದಾರೆ.
ಶಿಕ್ಷೆಯ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಗ್ರಾಮಸ್ಥರ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಅಪರಾಧವನ್ನು ಶಿಕ್ಷಿಸದೆ ಬಿಡುತ್ತದೆಯೇ ಎಂದಿದ್ದಾರೆ.
ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಳಾ ತಿಳಿಸಿದ್ದಾರೆ. ಘಟನೆಯನ್ನು ಹತ್ತಿಕ್ಕಲು ಯತ್ನಿಸಿದವರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
BIGG NEWS : ರಾಜ್ಯದ ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
BIGG NEWS: ಮಂಗಳೂರಿನ ಭೂತಾರಾಧನೆ ಈಗ ಬೆಂಗಳೂರಿಗೆ ಸ್ಥಳಾಂತರ; ಕೊರಗಜ್ಜನ ಹೆಸರಲ್ಲಿ ಹಣ ವಸೂಲಿ
BIGG NEWS : ರಾಜ್ಯದ ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ