ಭೋಪಾಲ್(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮೊಬೈಲ್ ಕಳ್ಳತನದ ಶಂಕೆಯ ಮೇಲೆ ವ್ಯಕ್ತಿಯೊಬ್ಬ12 ವರ್ಷದ ಬಾಲಕನ ಕೈಯನ್ನು ಹಿಡಿದು ನೀರು ತುಂಬಿರುವ ಬಾವಿಯ ಒಳಗೆ ಜೋತು ಬಿಟ್ಟಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಛತ್ತರ್ಪುರ ಜಿಲ್ಲೆಯ ಅತ್ಖೋನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿತುವ ವಿಡಿಯೋದಲ್ಲಿ, ನಾನು ಯಾವುದೇ ಮೊಬೈಲ್ ಫೋನ್ ಕದ್ದಿಲ್ಲ. ತನ್ನನ್ನು ಹೊರಗೆ ಬಿಡುವಂತೆ ಮಗು ಅಳುತ್ತಾ ಗೋಗರಿಯುತ್ತಿದ್ದಾನೆ. ಆದ್ರೆ, ವ್ಯಕ್ತಿ ಬಾಲಕನನ್ನು ಕಳೆಗೆ ಬೀಳಿಸುವುದಾಗಿ ಬೆದರಿಕೆ ಹಾಕುವುದನ್ನು ನೋಡಬಹುದು.
मोबाइल चोरी की शंका में नाबालिग को भरे कुएं में लटकायाhttps://t.co/gDD66D13ID#chhatarpur #crime #viralvideo #MadhyaPradesh #MPNews #AmarUjala #AmarUjalaNews #amarujalamp pic.twitter.com/kecYvYhypW
— Dinesh Sharma (@dinesh6186) October 17, 2022
ವಿಡಿಯೋವನ್ನು ಚಿತ್ರೀಕರಿಸಿದ 14 ವರ್ಷದ ಬಾಲಕ ಸಂತ್ರಸ್ತ ಬಾಲಕನ ಪೋಷಕರಿಗೆ ತೋರಿಸಿದ್ದಾನೆ. ನಂತ್ರ ಪೋಷಕರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
WATCH VIDEO: ʻಮಿಠಾಯಿ ಕದ್ದು ತಿಂದ ತನ್ನ ತಾಯಿʼಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕ! ವಿಡಿಯೋ ವೈರಲ್
BIGG NEWS: ಬಾಗಲಕೋಟೆಯಲ್ಲಿ ಮಾರ್ಯಾದೆ ಹತ್ಯೆ; ಪ್ರೇಮಿಗಳಿಬ್ಬರನ್ನು ನಂಬಿಸಿ ಕೊಲೆ ಮಾಡಿದ ಪೋಷಕರು
BIGG NEWS : ಇಡೀ ನಾಗರೀಕ ಸಮಾಜವೇ ತಲೆತಗ್ಗಿಸೋ ಘಟನೆ : ಕಲಬುರಗಿಯಲ್ಲಿ ಅನಾಥೆಯ ಮೃತದೇಹ ಕಿತ್ತು ತಿಂದ ಬೀದಿನಾಯಿಗಳು