ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಸ್ರೇಲಿ ಸೈನಿಕನೊಬ್ಬನ ಕ್ರೌರ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ರಸ್ತೆ ಬದಿಯಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಮಾಡುತ್ತಿದ್ದ ಪ್ಯಾಲೆಸ್ಟೀನಿಯನ್ ವ್ಯಕ್ತಿಯೊಬ್ಬನ ಮೇಲೆ ತನ್ನ ವಾಹನ ಹತ್ತಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಂತರರಾಷ್ಟ್ರೀಯ ಟೀಕೆಗೆ ಗುರಿಯಾಗಿದೆ.
ವೆಸ್ಟ್ ಬ್ಯಾಂಕ್’ನಲ್ಲಿರುವ ದೇರ್ ಜರಿರ್ ಗ್ರಾಮದ ಬಳಿ, ರಸ್ತೆ ಪಕ್ಕದಲ್ಲಿ ಪ್ಯಾಲೆಸ್ಟೀನಿಯನ್ ಪ್ರಾರ್ಥನೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಾಗರಿಕ ಉಡುಪಿನಲ್ಲಿದ್ದ ಇಸ್ರೇಲಿ ಸೈನಿಕ, ಆ ವ್ಯಕ್ತಿಯನ್ನು ತನ್ನ ವಾಹನದಿಂದ ಡಿಕ್ಕಿ ಹೊಡೆದಿದ್ದಲ್ಲದೆ, ಕೆಳಗೆ ಬಿದ್ದ ಬಲಿಪಶುವಿನ ಮೇಲೆ ಕೂಗಾಡಿ, ಅಲ್ಲಿಂದ ಹೋಗುವಂತೆ ಬೆದರಿಕೆ ಹಾಕಿದ್ದಾನೆ. ದಾಳಿಯಲ್ಲಿ ಬಲಿಪಶುವಿನ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸೈನಿಕ ಬಲಿಪಶುವಿನ ಮೇಲೆ ಪೆಪ್ಪರ್ ಸ್ಪ್ರೇ ಕೂಡ ಬಳಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Shocking footage shows an armed Israeli settler driving a four-wheel-drive vehicle and deliberately running over a Palestinian worshipper for no apparent reason, then continuing to try to push him off the road. The incident occurred near Ramallah. pic.twitter.com/4RQuY3jdLv
— ✌️🇵🇸✌️ Mohammed Najjar (@hamada_pal2020) December 25, 2025
ಸೈನಿಕನ ವಿರುದ್ಧ ಇಸ್ರೇಲಿ ಸೇನೆಯ ಕ್ರಮಗಳು.!
ಘಟನೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಇಸ್ರೇಲ್ ರಕ್ಷಣಾ ಪಡೆಗಳು (IDF) ಪ್ರತಿಕ್ರಿಯಿಸಿವೆ. ಆರೋಪಿ ಸೈನಿಕ ತನ್ನ ಅಧಿಕಾರವನ್ನ ಮೀರಿದ ಮತ್ತು ಅತ್ಯಂತ ಘೋರ ರೀತಿಯಲ್ಲಿ ವರ್ತಿಸಿದ ಆರೋಪ ಹೊರಿಸಲಾಗಿದ್ದು, ಆತನನ್ನು ತಕ್ಷಣ ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಆತನನ್ನ ಬಂಧಿಸಲಾಗಿದ್ದು, ಆತನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.








