ಲಕ್ನೋ: ಗಾಯಗೊಂಡಿರುವ ಯುವತಿಯೊಬ್ಬಳು ಸಹಾಯಕ್ಕಾಗಿ ಜನರ ಬಳಿ ಮನವಿ ಮಾಡದ್ರೆ, ಅಲ್ಲಿದ್ದ ಜನರು ತಮ್ಮ ಮೊಬೈಲ್ ಫೋನ್ಗಳಲ್ಲಿ ಯುವತಿಯನ್ನು ವಿಡಿಯೋ ಮಾಡುತ್ತಿರುವ ಶಾಕಿಂಗ್ ವಿಡಿಯೋವೊಂದು ಹೊರಬಿದ್ದಿದೆ.
ಈ ಘಟನೆ ಉತ್ತರ ಪ್ರದೇಶದ ಕನೌಜ್ನಲ್ಲಿ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ತೀವ್ರವಾಗಿ ಗಾಯಗೊಂಡಿರುವ ಯುವತಿಯೊಬ್ಬಳು ಸಹಾಯಕ್ಕಾಗಿ ಮನವಿ ಮಾಡುತ್ತಾಳೆ. ಆದರೆ, ಪುರುಷರ ಗುಂಪೊಂದು ಅವಳ ಸುತ್ತಲೂ ಮೊಬೈಲ್ ಫೋನ್ಗಳಲ್ಲಿ ಚಿತ್ರೀಕರಿಸುವತ್ತ ಬ್ಯುಸಿಯಾಗಿರುವುದನ್ನು ನೋಡಬಹುದು. ಆದ್ರೆ, ಯಾರೊಬ್ಬರೂ ಕೂಡ ಆಕೆಯ ಸಹಾಯಕ್ಕೆ ಬಂದಿಲ್ಲ.
वीडियो कन्नौज के गुरसहायगंज से है। रविवार को पीडब्ल्यूडी के डाक बंगले में 10 साल की एक बच्ची खून से लथपथ मिली। उसके चेहरे को ईंट-पत्थर से बुरी तरह कुचल दिया गया था। मजमा मदद के बजाए उसका वीडियो बनाने लगा। बच्ची मदद मांगती रही। तमाशबीन डटे रहे। #kannauj@kannaujpolice @Uppolice pic.twitter.com/l7FD0YUgZf
— Tariq Iqbal (@tariq_iqbal) October 23, 2022
13 ವರ್ಷದ ಬಾಲಕಿ ಭಾನುವಾರ ತನ್ನ ಮನೆಯಿಂದ ನಾಪತ್ತೆಯಾದ ಕೆಲ ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಯೊಬ್ಬರು ಬಾಲಕಿಯನ್ನು ಆಟೋರಿಕ್ಷಾ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಯಾರನ್ನೂ ಸಹ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋ: ಬೀದಿ ಬದಿ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳನ್ನು ಧ್ವಂಸಗೊಳಿಸಿದ ವೈದ್ಯೆ | WATCH VIDEO
BIGG NEWS : ಮುಂದಿನ ಅಧಿವೇಶನದಲ್ಲಿ `SC-ST’ ಮೀಸಲಾತಿ ಹೆಚ್ಚಳಕ್ಕೆ ಅನುಮೋದನೆ : ಸಿಎಂ ಬಸವರಾಜ ಬೊಮ್ಮಾಯಿ