ದೆಹಲಿ: ದೆಹಲಿಯ ಕರೋಲ್ ಬಾಗ್ನಲ್ಲಿ ಸೋಮವಾರ ಭೀಕರ ಅಪಘಾತವೊಂದು ನಡೆದಿದೆ. ಟೊಯೊಟಾ ಫಾರ್ಚುನರ್ ವಾಹನವೊಂದು ನಿಂತಿದ್ದ ಹತ್ತಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರನನ್ನು ಸುಮಾರು ನೂರು ಮೀಟರ್ವರೆಗೆ ಎಳೆದೊಯ್ದಿದೆ.
ಕರೋಲ್ ಬಾಗ್ ನ ಪದಮ್ ಸಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದ ಸಿಸಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿದೆ.
ವಿಡಿಯೋದಲ್ಲಿ, ರಸ್ತೆಯ ಅಂಚಿನಲ್ಲಿ ಮಹಿಳೆಯೊಬ್ಬರು ನಿಂತಿರುವುದನ್ನು ಕಾಣಬಹುದು. ಈ ವೇಳೆ ಏಕಾಏಕಿ ಬಂದ SUV ನಿಲ್ಲಿಸಿದ ವಾಹನಗಳನ್ನು ಢಿಕ್ಕಿ ಹೊಡೆದುಕೊಂಡು ಬಂದಿದೆ. ಇದರಲ್ಲಿ ಸ್ಕೂಟಿ ಸವಾರನನ್ನು ನೂರು ಮೀಟರ್ವರೆಗೆ ಎಳೆದುಕೊಂಡು ಬರುವುದನ್ನು ನೋಡಬಹುದು.
ಎಸ್ಯುವಿ ಸದ್ಯ ಪೊಲೀಸರ ವಶದಲ್ಲಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಇನ್ನೂ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
BIGG NEWS : ವೈದ್ಯಕೀಯ ಪರೀಕ್ಷೆಗಾಗಿ ಮುರುಘಾ ಶ್ರೀಗಳನ್ನು ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ
BIG NEWS: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ʻರಾಹುಲ್ ಗಾಂಧಿʼಯೇ ನಮ್ಮ ಮೊದಲ ಆಯ್ಕೆ: ಮೂಲಗಳು