ಮಹಾರಾಷ್ಟ್ರ: ಸೆಪ್ಟೆಂಬರ್ 6 ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ಗುಂಪೊಂದು ವೈದ್ಯ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಕ್ಲಿನಿಕ್ ಬಾಗಿಲು ತೆರೆಯಲು ವಿಳಂಬವಾಗಿದ್ದಕ್ಕೆ ಆಕ್ರೋಶಗೊಂಡ ಕೆಲವರು ಈ ಕೃತ್ಯವೆಸಗಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಾವಳಿ ಕ್ಲಿನಿಕ್ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ವೈದ್ಯ ಯುವರಾಜ್ ಗಾಯಕ್ವಾಡ್ ಅವರ ಮನೆಯ ಹೊರಗಿರುವ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ. ಯುವರಾಜ್ ಅವರು ಸೆಪ್ಟೆಂಬರ್ 6 ರ ರಾತ್ರಿ ತಮ್ಮ ಕುಟುಂಬದೊಂದಿಗೆ ಊಟ ಮಾಡುತ್ತಿದ್ದಾಗ ಅವರ ಮನೆ ಬಾಗಿಲು ಜೋರಾಗಿ ಬಡಿಯುವ ಶಬ್ಧ ಕೇಳಿದೆ. ಈ ವೇಳೆ ಬಾಗಿಲು ತೆಗೆಯುವುದು ಸ್ವಲ್ಪ ತಡವಾಗಿದೆ. ಇದರಿಂದ ಆಕ್ರೋಶಗೊಂಡ ಗುಂಪು ಕಿಟಕಿಯ ಗಾಜು ಒಡೆದು ಒಳಗೆ ನುಗ್ಗಿದೆ.
कैसे- कैसे लोग…!?
बारामती के सांगवी में एक आयुर्वेदिक #Doctor ने देर से दरवाजा खोला तो मरीज के साथ आए लोगों ने डॉक्टर और उनके बेटे की जमकर पिटाई कर दी!
मालेगांव पुलिस #FIR दर्ज कर जांच कर रही है। @ndtvvideos@ndtvindia pic.twitter.com/9deiLBsopZ— sunilkumar singh (@sunilcredible) September 11, 2022
ಯುವರಾಜ್ ಅಂತಿಮವಾಗಿ ಬಾಗಿಲು ತೆರೆದಾಗ, ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜೀತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್ ಎಂಬುವವರು ಒಳಗೆ ನುಗ್ಗಿ ವೈದ್ಯ ಮತ್ತು ಅವರ ಮಗನನ್ನು ಥಳಿಸಿದ್ದಾರೆ.
ಮಾಲೆಗಾಂವ್ ಪೊಲೀಸರು ವೈದ್ಯರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ದೂರಿನ ಅನ್ವಯ ತನಿಖೆ ನಡೆಯುತ್ತಿದೆ.
BIG NEWS: ತ್ಯಾಜ್ಯ ನೀರಿನಲ್ಲಿ ʻಪೋಲಿಯೊ ವೈರಸ್ʼ ಪತ್ತೆ: ತುರ್ತು ಪರಿಸ್ಥಿತಿ ಘೋಷಿಸಿದ ನ್ಯೂಯಾರ್ಕ್
ಮಹಿಳೆ ಮಾತು ಕೇಳಿ ವಿಡಿಯೋ ಕಾಲ್ನಲ್ಲಿ ಬೆತ್ತಲಾದ ವ್ಯಕ್ತಿಗೆ 5.28 ಲಕ್ಷ ರೂ. ಪಂಗನಾಮ!