ನವದೆಹಲಿ: ಜನರ ಗುಂಪೊಂದು ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾ ಥಳಿಸಿರುವ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ 10-12 ಜನರ ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಿದ್ದಲ್ಲದೇ, ಅಲ್ಲಿದ್ದ ಹೆಡ್ಕಾನ್ಸ್ಟೆಬಲೊಬ್ಬರನ್ನು ಮನಬಂದಂತೆ ಥಳಿಸಿದ್ದಾರೆ. ಆದ್ರೆ, ಈ ವೇಳೆ ಯಾರೂ ಕೂಡ ಅವರನ್ನು ತಡೆಯಲು ಮುಂದಾಗಿಲ್ಲ. ಘಟನೆಯ ವಿಡಿಯೋವನ್ನು ಅಲ್ಲಿದ್ದ ಬೇರೆ ಪೊಲೀಸ್ ಸಿಬ್ಬಂದಿಗಳು ಚಿತ್ರೀಕರಿಸಿದ್ದಾರೆ.
A head constable of @DelhiPolice, Prakash was abused & assaulted by some people at Anand Vihar police station on July 30. Two persons have been arrested, say police
(Viral video) pic.twitter.com/7dTOiiBHWC
— The New Indian (@TheNewIndian_in) August 6, 2022
ಪೊಲೀಸರಿಗೆ ಏಕೆ ಥಳಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಆಗಸ್ಟ್ 3 ರಂದು ನಡೆದಿದೆ. ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
BIGG NEWS : ರಾಜ್ಯದಲ್ಲಿ ವರುಣಾರ್ಭಟ : ನೆರೆಪೀಡಿತ 21 ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ