ಇಂದೋರ್: ನೈರ್ಮಲ್ಯ ಕಾರ್ಮಿಕರು ಮತ್ತು ಅವರ ಸಂಬಂಧಿಕರ ಗುಂಪೊಂದು ಗುರುವಾರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ರಾವು ಪುರಸಭೆಯ ಬಿಜೆಪಿ ಕಾರ್ಪೊರೇಟರ್ ಪತಿಗೆ ಥಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾವು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನರೇಂದ್ರ ಸಿಂಗ್ ರಘುವಂಶಿ, ದೂರವಾಣಿಯಲ್ಲಿ ಮಹಿಳಾ ಕಾರ್ಮಿಕರನ್ನು ನಿಂದಿಸಿದ ಆರೋಪದ ಮೇಲೆ ನೈರ್ಮಲ್ಯ ಕಾರ್ಮಿಕರ ಗುಂಪು ಮಧ್ಯಾಹ್ನ ಪೊಲೀಸ್ ಠಾಣೆಗೆ ಆಗಮಿಸಿ ಸಂದೀಪ್ ಚೋಹಾನ್ ವಿರುದ್ಧ ದೂರು ದಾಖಲಿಸಿದೆ.
group of sanitation workers and their relatives allegedly thrashed the husband of a BJP corporator of Rau Municipality at a police station in the district on Thursday. Corporator allegedly abusing a woman worker over phone. https://t.co/TIvM77coA5
— Kishore Javaji (@kishorejavaji) October 14, 2022
ಸಂದೀಪ್ ಚೋಹನ್ ಅವರ ಪತ್ನಿ ಪುರಸಭೆಯ ವಾರ್ಡ್ ಸಂಖ್ಯೆ 13 ರಿಂದ ಕಾರ್ಪೊರೇಟರ್ ಆಗಿದ್ದಾರೆ. ಎರಡೂ ಗುಂಪುಗಳ ನಡುವೆ ಸಂದಾನ ನಡೆಸುವುದಕ್ಕಾಗಿ ಚೋಹನ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಆದರೆ ತೀವ್ರ ಮಾತಿನ ಚಕಮಕಿ ನಡೆದು ಗುಂಪಿನ ಕೆಲವು ಜನರು ಆತನ ಮೇಲೆ ಹಿಗಾಮುಗ್ಗಾ ಹಲ್ಲೆ ನಡೆಸಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎರಡೂ ಕಡೆಯವರು ಪರಸ್ಪರ ಹಲ್ಲೆ ಮತ್ತು ಬೆದರಿಕೆಯ ದೂರುಗಳನ್ನು ದಾಖಲಿಸಿದ್ದಾರೆ ಎಂದು ರಘುವಂಶಿ ಹೇಳಿದ್ದಾರೆ.
BREAKING NEWS: ಓಲಾ, ಊಬರ್ಗೆ ಬಿಗ್ ರಿಲೀಫ್; ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ