ದೆಹಲಿ : ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಕಾರಿಗೆ ಗುದ್ದಿ ಕೆಳಗೆ ಬೀಳುತ್ತಾನೆ. ಈ ವೇಳೆ ಆತ ಸ್ವತಃ ತಾನೇ ಮೇಲೆಳುತ್ತಾನೆ. ದುರಾದೃಷ್ಟವೆಂಬಂತೆ ಅಲ್ಲಿದ್ದ ವಿದ್ಯುತ್ ಕಂಬ ಅವನ ತಲೆಗೆ ಬಡಿಯುತ್ತದೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದೆಹಲಿ ಪೊಲೀಸರು ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ, ಕಾರೊಂದು ಎಡ ಬದಿಗೆ ಕ್ರಾಸ್ ಮಾಡಿಕೊಳುತ್ತಿರುತ್ತದೆ. ಈ ವೇಳೆ ಬಂದ ಬೈಕೊಂದು ಕಾರಿಗೆ ಗುದ್ದಿದ ಪರಿಣಾಮ ಸವಾರ ಕೆಳಗೆ ಬೀಳುತ್ತಾನೆ. ಈತ ಹೇಗೋ ತಾನೇ ಮೇಲೇಳುತ್ತಾನೆ. ಆದ್ರೆ, ಅವನ ದುರಾದೃಷ್ಟವೆಂಬಂತೆ ಅಲ್ಲಿದ್ದ ವಿದ್ಯುತ್ ಕಂಬ ಅವನ ತಲೆಗೆ ಬಡಿಯುವುದನ್ನು ನೋಡಬಹುದು.
God helps those who wear helmet !#RoadSafety#DelhiPoliceCares pic.twitter.com/H2BiF21DDD
— Delhi Police (@DelhiPolice) September 15, 2022
ಎರಡು ಘಟನೆಗಳಲ್ಲೂ ವ್ಯಕ್ತಿಯ ತಲೆಗೆ ಪೆಟ್ಟು ಬಿದ್ದಿದ್ದರೂ ಹೆಲ್ಮೆಟ್ ಆತನನ್ನು ಪ್ರಾನಾಪಾಯದಿಂದ ಪಾರು ಮಾಡಿದೆ ಮತ್ತು ತಲೆಗೆ ಗಾಯವಾಗುವುದನ್ನು ತಪ್ಪಿಸಿದೆ. ಎರಡು ಘಟನೆಗಳು ಕೆಲವೇ ಸೆಕೆಂಡುಗಳಲ್ಲಿ ನಡೆದಿವೆ.
ನಾಳೆ ನಮೀಬಿಯಾದಿಂದ ಭಾರತಕ್ಕೆ 8 ಚಿರತೆಗಳ ಆಗಮನ… ಅವುಗಳ ಫಸ್ಟ್ ಲುಕ್ ಇಲ್ಲಿದೆ ನೋಡಿ!