ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕೋತಿಯೊಂದು ಮದ್ಯದಂಗಡಿಗೆ ನುಗ್ಗಿ ಬಿಯರ್ ಕುಡಿಯುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಅಷ್ಟೇ ಅಲ್ಲದೇ, ಈ ಕೋತಿಯು ಜನರ ಮದ್ಯದ ಬಾಟಲಿಗಳನ್ನು ಕದ್ದಿದೆ ಎಂಬ ಆರೋಪವೂ ಕೇಳಿಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಕೋತಿ ಬಿಯರ್ ಟಿನ್ ಹಿಡಿದು ಗಟಗಟನೇ ಕುಡಿಯುತ್ತಿರುವುದನ್ನು ನೋಡಬಹುದು.
रायबरेली में बंदर का शराब पीने का वीडियो हुआ वायरल जो शराब की दुकान में आने वाले लोगो से शराब छीन लेता है और गटक जाता है। pic.twitter.com/We8qaAY4pi
— Anurag Mishra (@AnuragM27306258) October 30, 2022
ಜಿಲ್ಲೆಯ ಅಚಲಗಂಜ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ಯದ ಅಂಗಡಿಯವರೊಬ್ಬರು ಮದ್ಯ ಕಳ್ಳನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋತಿಯನ್ನು ಅಟ್ಟಿಸಿಕೊಂಡು ಹೋದರೆ ಅದು ಕಚ್ಚುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಸುಮ್ಮನಿದ್ದಾರೆ ಎಂದು ಅಂಗಡಿಕಾರರು ಆರೋಪಿಸಿದ್ದಾರೆ.
ಜಿಲ್ಲಾ ಅಬಕಾರಿ ಅಧಿಕಾರಿ ರಾಜೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಅರಣ್ಯ ಇಲಾಖೆಯ ನೆರವಿನಿಂದ ಈ ಕೋತಿಯನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ, ಶೀಘ್ರದಲ್ಲೇ ಗ್ರಾಹಕರು ಈ ಸಮಸ್ಯೆಯಿಂದ ಮುಕ್ತರಾಗುತ್ತಾರೆ ಎಂದಿದ್ದಾರೆ.
WATCH VIDEO: ಶಿರಚ್ಛೇದಿತ ಮಾನವನ ತಲೆಯನ್ನು ಬಾಯಲ್ಲಿ ಕಚ್ಚಿಕೊಂಡು ಬೀದಿ ಬೀದಿ ಸುತ್ತಿದ ನಾಯಿ… ಭಯಾನಕ ವಿಡಿಯೋ ವೈರಲ್
BIGG BREAKING NEWS : ಬಹುಭಾಷಾ ನಟಿ `ರಂಭಾ’ ಕಾರು ಅಪಘಾತ : ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು